Select Your Language

Notifications

webdunia
webdunia
webdunia
webdunia

ಕ್ಯಾನ್ಸರ್‌ನಿಂದ ಕೊನೆ ದಿನ ಎಣಿಸುತ್ತಿದ್ದ ಅಜ್ಜಿಯನ್ನು ಕಸದ ರಾಶಿಗೆ ಎಸೆದು ಹೋದ ಮೊಮ್ಮಗ

ಮುಂಬೈ ಕ್ಯಾನ್ಸರ್ ರೋಗಿಯ ಕಸ ಪ್ರಕರಣ

Sampriya

ಮುಂಬೈ , ಸೋಮವಾರ, 23 ಜೂನ್ 2025 (17:46 IST)
Photo Credit X
ಮುಂಬೈ: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಹಿಳೆಯನ್ನು ಮೊಮ್ಮಗನೊಬ್ಬ ಕಸದ ರಾಶಿ ಬಳಿ ಎಸೆದುಹೋಗಿರುವ ಕ್ರೋರ ಘಟನೆ ಮುಂಬೈನಲ್ಲಿ ವರದಿಯಾಗಿದೆ. 

ಶನಿವಾರದಂದು ಮುಂಬೈ ಪೊಲೀಸರು ನಗರದ ಆರೆ ಕಾಲೋನಿಯ ರಸ್ತೆಯ ಕಸದ ರಾಶಿಯ ಬಳಿ 60 ವರ್ಷದ ಮಹಿಳೆ ಯಶೋದಾ ಗಾಯಕ್‌ವಾಡ್ ಅತ್ಯಂತ ದುರ್ಬಲ ಸ್ಥಿತಿಯಲ್ಲಿ ಕಂಡುಬಂದಾಗ ಘಟನೆ ಬೆಳಕಿಗೆ ಬಂದಿದೆ.

ಮಹಿಳೆಯನ್ನು ವಿಚಾರಿಸಿದಾಗ  ತನ್ನ ಮೊಮ್ಮಗ ಕಸದ ರಾಶಿ ಮೇಲೆ ಎಸೆದುಹೋಗಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.  

ಆಕೆಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹಲವಾರು ಇತರ ಆಸ್ಪತ್ರೆಗಳು ಆಕೆಗೆ ದಾಖಲಾತಿಯನ್ನು ನಿರಾಕರಿಸಿದ ನಂತರ ಆಕೆಯನ್ನು ಕೂಪರ್ ಆಸ್ಪತ್ರೆಗೆ ದಾಖಲಿಸಲಾಯಿತು.

ಮಹಿಳೆ ಚರ್ಮದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ. 

ವಯಸ್ಸಾದ ಮಹಿಳೆ ತನ್ನ ಕುಟುಂಬದ ಸದಸ್ಯರ ಎರಡು ವಿಳಾಸಗಳನ್ನು ಹಂಚಿಕೊಂಡಿದ್ದಾಳೆ - ಒಂದು ಮಲಾಡ್‌ನಲ್ಲಿ ಮತ್ತು ಇನ್ನೊಂದು ಕಾಂದಿವಲಿಯಲ್ಲಿ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ಕುಟುಂಬದ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. ಸಂಬಂಧಿಕರನ್ನು ಪತ್ತೆಹಚ್ಚಲು ಆಕೆಯ ಚಿತ್ರವನ್ನು ಪೊಲೀಸ್ ಠಾಣೆಗಳಲ್ಲಿ ಹಂಚಿಕೊಳ್ಳಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಸ್ರೇಲ್‌ ನಡುವಿನ ಸಂಘರ್ಷ: ಇರಾನ್‌ಗೆ ರಫ್ತಾಗದೆ ಭಾರತದಲ್ಲೇ ಉಳಿದ 1ಲಕ್ಷ ಟನ್ ಬಾಸ್ಮತಿ