Select Your Language

Notifications

webdunia
webdunia
webdunia
webdunia

ಡಿಕೆ ಶಿವಕುಮಾರ್ ಭೇಟಿಯಾದ ರಿಷಬ್ ಶೆಟ್ಟಿ: ರಾಹುಲ್ ಗಾಂಧಿ ಬಗ್ಗೆ ನೋ ಕಾಮೆಂಟ್ಸ್ ಎಂದಿದ್ರು ಎಂದ ನೆಟ್ಟಿಗರು

DK Shivakumar-Rishab Shetty

Krishnaveni K

ಬೆಂಗಳೂರು , ಗುರುವಾರ, 20 ನವೆಂಬರ್ 2025 (08:59 IST)
Photo Credit: X
ಬೆಂಗಳೂರು: ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಿನ್ನೆ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದರು. ಈ ಫೋಟೋಗಳನ್ನು ಡಿಕೆಶಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಕ್ಕೆ ನೆಟ್ಟಿಗರು ರಾಹುಲ್ ಗಾಂಧಿ ಬಗ್ಗೆ ನೋ ಕಾಮೆಂಟ್ಸ್ ಎಂದಿದ್ದರು ಎಂದು ಕಾಲೆಳೆದಿದ್ದಾರೆ.

ಕಾಂತಾರ ಸಿನಿಮಾ ಬಳಿಕ ರಿಷಬ್ ಶೆಟ್ಟಿ ಸ್ಟಾರ್ ಗಿರಿ ಹೆಚ್ಚಾಗಿದೆ. ಇದೀಗ ಅವರು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ನಿನ್ನೆ ಡಿಕೆ ಶಿವಕುಮಾರ್ ನಿವಾಸಕ್ಕೆ ಸೌಹಾರ್ದಯುತ ಭೇಟಿ ಕೊಟ್ಟಿದ್ದ ರಿಷಬ್ ಕೆಲವು ಹೊತ್ತು ಮಾತುಕತೆ ನಡೆಸಿದ್ದರು.

ಈ ಫೋಟೋಗಳನ್ನು ಡಿಕೆ ಶಿವಕುಮಾರ್ ಹಂಚಿಕೊಂಡಿದ್ದು ‘ಖ್ಯಾತ ನಟ ರಿಷಬ್ ಶೆಟ್ಟಿ  ಯವರು ಇಂದು ನನ್ನ ಗೃಹಕಚೇರಿಯಲ್ಲಿ ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಈ ವೇಳೆ 'ಕಾಂತಾರ: ಒಂದು ದಂತಕಥೆ - ಅಧ್ಯಾಯ 1'  ಚಿತ್ರ ಯಶಸ್ವಿಯಾಗಿರುವುದಕ್ಕೆ ಅಭಿನಂದನೆ ಸಲ್ಲಿಸಿದೆ. ನಮ್ಮ ನೆಲಮೂಲದ ಆಚಾರ-ವಿಚಾರ, ಸಂಪ್ರದಾಯ, ಸಂಸೃತಿಯನ್ನು ಇಡೀ ಪ್ರಪಂಚಕ್ಕೆ ಪರಿಚಯಿಸಿರುವ ರಿಷಬ್‌ ಶೆಟ್ಟಿ ಅವರ ಕಾರ್ಯವೈಖರಿ ಶ್ಲಾಘನೀಯ. ಮುಂದಿನ ಅವರ ಚಿತ್ರರಂಗದ ಪಯಣಕ್ಕೆ ಒಳ್ಳೆಯದಾಗಲಿ, ಇನ್ನೂ ಎತ್ತರಕ್ಕೆ ಅವರು ಬೆಳೆಯಲಿ ಎಂದು ಶುಭಹಾರೈಸಿದೆ’ ಎಂದು ಬರೆದು ಫೋಟೋ ಪ್ರಕಟಿಸಿದ್ದರು.

ಇದಕ್ಕೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಒಬ್ಬರು ರಾಹುಲ್ ಗಾಂಧಿ ಪರಿಚಯ ಉಂಟಾ ಎಂದು ಕೇಳಬೇಕಿತ್ತು ಎಂದು ಕಿಚಾಯಿಸಿದ್ದಾರೆ. ಇನ್ನೊಬ್ಬರು, ನಿಮ್ಮ ನಾಯಕ ರಾಹುಲ್ ಗಾಂಧಿ ಬಗ್ಗೆ ನೋ ಕಾಮೆಂಟ್ಸ್ ಎಂದ ವ್ಯಕ್ತಿಯನ್ನು ಖ್ಯಾತ ನಟ ಅಂತೀರಲ್ಲ ಸಾರ್ ಎಂದು ಕಾಲೆಳೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Video: ಪ್ರಧಾನಿ ಮೋದಿಯ ಕಾಲು ಹಿಡಿದ ಐಶ್ವರ್ಯಾ ರೈ ಬಚ್ಚನ್: ಕೆಲವರಿಗೆ ಖುಷಿ, ಇನ್ನು ಕೆಲವರಿಗೆ ಉರಿ