ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲದಿದ್ದರೂ ಸಂಪುಟ ವಿಸ್ತರಣೆಗೆ ಸರ್ಕಸ್ ನಡೆಯುತ್ತಿದೆ. ಆದರೆ ಇಲ್ಲಿಯೂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನಡುವೆ ಮುಸುಕಿನ ಗುದ್ದಾಟವಿದೆ ಎನ್ನಲಾಗುತ್ತಿದೆ.
ಸಿಎಂ ಸಿದ್ದರಾಮಯ್ಯಗೆ ತಾವೇ ಐದೂ ವರ್ಷ ಪೂರ್ತಿ ಮಾಡಬೇಕು ಎಂದಿದೆ. ಆದರೆ ಅತ್ತ ಡಿಸಿಎಂ ಡಿಕೆ ಶಿವಕುಮಾರ್ ಗೆ ನಾಯಕತ್ವ ಬದಲಾವಣೆಯಾಗದೇ ಇದ್ದರೆ ಸಂಪುಟದಲ್ಲಿ ಪ್ರಾತಿನಿಧ್ಯ ಸಿಗಬೇಕು ಎಂಬ ಡಿಮ್ಯಾಂಡ್ ಇದೆ.
ಈಗಾಗಲೇ ಸಿಎಂ ತಮ್ಮ ಬಳಗದ ಕೆಲವರಿಗೆ ಸಚಿವ ಸ್ಥಾನ ನೀಡಲು ಪಟ್ಟಿ ಮಾಡಿಕೊಂಡಿದ್ದಾರೆ. ಈ ನಡುವೆ ಡಿಕೆ ಶಿವಕುಮಾರ್ ತಮ್ಮ ಆಪ್ತರಿಗೇ ಸಚಿವ ಸ್ಥಾನ ನೀಡಬೇಕು ಎಂದು ಪಟ್ಟು ಹಿಡಿದು ಕೂತಿದ್ದಾರೆ. ಹೀಗಾಗಿ ಸಚಿವ ಸಂಪುಟ ವಿಸ್ತರಣೆಯೂ ಅಷ್ಟು ಸುಲಭದ ಮಾತಲ್ಲ.
ಇನ್ನೊಂದೆಡೆ ಸಚಿವ ಆಕಾಂಕ್ಷಿಗಳ ಅಸಮಾಧಾನಗಳನ್ನೂ ತೀರಿಸಬೇಕಾಗುತ್ತದೆ. ಹೀಗಾಗಿ ಸಚಿವ ಸಂಪುಟ ವಿಸ್ತರಣೆ ಎನ್ನುವುದು ಕತ್ತಿಯ ಮೇಲಿನ ನಡಿಗೆಯಾಗಲಿದೆ. ಇಲ್ಲಿಯೂ ಡಿಕೆಶಿ ಮೆಲುಗೈ ಸಾಧಿಸುತ್ತಾರಾ, ಸಿದ್ದು ಕೈ ಮೇಲಾಗುತ್ತಾ ಎನ್ನುವ ಕುತೂಹಲ ಇದ್ದೇ ಇದೆ.