Select Your Language

Notifications

webdunia
webdunia
webdunia
webdunia

ಡಿಸೆಂಬರ್‌ನಲ್ಲಿ ಮುಳ್ಳಯ್ಯನಗಿರಿಗೆ ಟ್ರಿಪ್ ಪ್ಲಾನ್ ಮಾಡಿದವರು ಈ ಸುದ್ದಿ ಓದಲೇ ಬೇಕು

Mullayyanagiri Peak

Sampriya

ಚಿಕ್ಕಮಗಳೂರು , ಬುಧವಾರ, 19 ನವೆಂಬರ್ 2025 (13:18 IST)
Photo Credit X
ಚಿಕ್ಕಮಗಳೂರು: ಡಿಸೆಂಬರ್ 1ರಿಂದ 4ರವರೆಗೆ ದತ್ತಪೀಠದಲ್ಲಿ ದತ್ತಜಯಂತಿ ಹಿನ್ನೆಲೆ ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ಭಾಗಕ್ಕೆ ಪ್ರವಾಸಿಗರಿಗೆ ನಿರ್ಬಂಧವನ್ನು ಹೇರಿ ಜಿಲ್ಲಾಡಳಿತ ಆದೇಶವನ್ನು ಹೊರಡಿಸಿದೆ. ಈ ಹಿನ್ನೆಲೆ ಈ ಸಂದರ್ಭದಲ್ಲಿ ಟ್ರಿಪ್ ಪ್ಲಾನ್ ಮಾಡಿದವರು ರದ್ದು ಮಾಡುವುದು ಒಳಿತು. 

ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿ, ಗಾಳಿಕೆರೆ ಮಾಣಿಕ್ಯಧಾರಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.

ವಿಶ್ವಹಿಂದೂ ಪರಿಷತ್, ಬಜರಂಗದಳದ ನೇತೃತ್ವದಲ್ಲಿ ಡಿಸೆಂಬರ್ 2, 3 ಹಾಗೂ 4ರಂದು ದತ್ತಪೀಠದಲ್ಲಿ ದತ್ತಜಯಂತಿ ಸಂಭ್ರಮ ಅದ್ಧೂರಿಯಾಗಿದೆ ನಡೆಯಲಿದೆ. 

ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಪ್ರವಾಸಿಗರಿಗೆ ನಿರ್ಬಂಧ ಹೇರಿ  ಆದೇಶ ಹೊರಡಿಸಿದ್ದಾರೆ. ಡಿಸೆಂಬರ್ 5ರ ಬೆಳಗ್ಗೆ 10 ಗಂಟೆ ಬಳಿಕ ಮುಳ್ಳಯ್ಯನಗಿರಿ ಭಾಗ ಪ್ರವಾಸಿಗರಿಗೆ ಮುಕ್ತವಾಗಲಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ನವೆಂಬರ್ ಆರಂಭದಲ್ಲೇ ಹೀಗಾದ್ರೆ, ಮುಂದೇನು ಗತಿ