ಬೆಂಗಳೂರು: ನಿನ್ನೆ ಕೊಂಚ ಇಳಿಕೆಯಾಗಿದ್ದ ಚಿನ್ನದ ಬೆಲೆಯಲ್ಲಿ ಇಂದು ಮತ್ತೇ ಏರಿಕೆಯಾಗಿದೆ. ನಿನ್ನೆ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ₹174 ಇಳಿಕೆಯಾಗಿತ್ತು, ಇಂದು ₹120 ಏರಿಕೆಯಾಗಿದೆ.
22ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಮಂಗಳವಾರ ₹160 ಇಳಿಕೆಯಾಗಿತ್ತು, ಇಂದು ₹110 ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ ಪ್ರತಿ ಗ್ರಾಂಗೆ 24 ಕ್ಯಾರೆಟ್ ಚಿನ್ನಕ್ಕೆ ₹12,486, 22 ಕ್ಯಾರೆಟ್ ಚಿನ್ನಕ್ಕೆ ₹11,445 ಮತ್ತು 18 ಕ್ಯಾರೆಟ್ ಚಿನ್ನಕ್ಕೆ ₹9,364 ಆಗಿದೆ.
ಕಳೆದ ಕೆಲ ದಿನಗಳಿಂದ ಚಿನ್ನದ ಬೆಲೆಯಲ್ಲಿ ಏರಳಿತವಾಗುತ್ತಿದ್ದು, ಜುಲೈ ನಂತರ ಯಾವುದೇ ಭಾರೀ ಇಳಿಕೆಯನ್ನು ಕಂಡಿಲ್ಲ. ಒಟ್ಟಾರೆ ಪ್ರಸ್ತುತ ಚಿನ್ನದ ಬೆಲೆ ಭಾರೀ ಏರಿಕೆಯಿಂದಾಗಿ ಖರೀದಿಸುವವರು ದಿನದ ಚಿನ್ನದ ಧಾರಣೆಯನ್ನು ಕಂಡು ಶಾಕ್ ಆಗಿದ್ದಾರೆ.