ಮೈಸೂರು: ರಾಜ್ಯದಲ್ಲಿ ಚಳಿಗಾಲ ಶುರುವಾಗುತ್ತಿದ್ದ ಹಾಗೇ, ಸಿಲಿಕಾನ್ ಸಿಟಿ, ಮೈಸೂರಿನಲ್ಲಿ ಚಳಿಯ ತೀವ್ರತೆಗೆ ಮನೆಯಿಂದ ಈಗಲೇ ಹೊರಬರಲು ಹಿಂದೇಟು ಹಾಕಯತ್ತಿದ್ದಾರೆ.
ಆರಂಭದಲ್ಲೇ ಚಳಿಯ ತೀವ್ರತೆ ಇಷ್ಟು ಮಟ್ಟಿಗಿದ್ದರೆ, ಡಿಸೆಂಬರ್, ಜನವರಿಯಲ್ಲಿ ಹೀಗಿರಬಹುದು ಎಂದು ಚಿಂತೆಗೀಡದಾಗಿದ್ದಾರೆ.
ನವೆಂಬರ್ ಅಂತ್ಯದವರೆಗೂ ಹಿಂಗಾರು ಮಳೆಯಾಗಿ, ನಂತರದ ಮೂರು ತಿಂಗಳು ಚಳಿ ಕ್ರಮೇಣ ಹೆಚ್ಚಳವಾಗುವುದು ವಾಡಿಕೆ. ಆದರೆ ಈ ವರ್ಷ ಈ ತಿಂಗಳ ಆರಂಭದಲ್ಲೇ ಚಳಿ ತೀವ್ರ ಸ್ವರೂಪ ಪಡೆದಿದ್ದು, ವಾಕಿಂಗ್ ಹೋಗುವವರು, ಬೇಗನೇ ಶಾಲೆಗೆ ಹೋಗುವ ಮಕ್ಕಳಿಗೆ ಅನಾರೋಗ್ಯ ಕಾಡುವ ಭಯ ಶುರುವಾಗಿದೆ.
ಚಳಿಗಾಲದಲ್ಲಿ ಮಕ್ಕಳು, ವೃದ್ಧರಿಗೆ ಜ್ವರ, ಶೀತದಂತಹ ತೊಂದರೆಗಳು ಬಾಧಿಸುವುದು ಸಾಮಾನ್ಯ.