ಬೆಂಗಳೂರು: ನಿನ್ನೆ ದೆಹಲಿಗೆ ಹೋಗಿದ್ದ ಸಿಎಂ ಸಿದ್ದರಾಮಯ್ಯ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿದ್ದ ಫೋಟೋ ಟ್ವೀಟ್ ಮಾಡಿದ್ದರು. ಆದರೆ ದೇಶದ ಪ್ರಧಾನ ಮಂತ್ರಿ ಮೋದಿ ಭೇಟಿ ಮಾಡಿದ್ದರೂ ಫೋಟೋ ಹಾಕಿಲ್ಲ. ಇದಕ್ಕೆ ನೆಟ್ಟಿಗರೊಬ್ಬರು ಸಿಎಂಗೆ ಪ್ರಶ್ನೆ ಮಾಡಿದ್ದಾರೆ.
ನಿನ್ನೆ ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿದ ಸಿದ್ದರಾಮಯ್ಯ ಫೋಟೋ ಪ್ರಕಟಿಸಿ ಹಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚಿಸಿರುವುದಾಗಿ ಹೇಳಿದ್ದಾರೆ. ಇದಕ್ಕೆ ಮೊದಲು ಮೋದಿ ಭೇಟಿಯ ವಿಚಾರ ಹಂಚಿಕೊಂಡಿದ್ದರೂ ಅವರ ಜೊತೆಗೆ ಒಂದೇ ಒಂದು ಫೋಟೋ ಪ್ರಕಟಿಸಿಲ್ಲ.
ಇದಕ್ಕೆ ನೆಟ್ಟಿಗರೊಬ್ಬರು ಕಿಡಿ ಕಾರಿದ್ದಾರೆ. ಮೋದಿಯವರ ಜೊತೆ ತೆಗೆಸಿಕೊಂಡು ಒಂದು ಫೋಟೋ ಹಾಕಲಿಕ್ಕೆ ಕೂಡಾ ನಿಮಗೆ ರಾಜಕೀಯ ಅಡ್ಡಿ ಬರುತ್ತಾ? ಏನು ಭಯನಾ ಎಂದು ಕಾಲೆಳೆದಿದ್ದಾರೆ. ಕಳೆದ ಬಾರಿ ಮೋದಿ ಭೇಟಿ ಬಳಿಕ ಸಿದ್ದರಾಮಯ್ಯ ಫೋಟೋ ಪ್ರಕಟಿಸಿದ್ದರು. ಆದರೆ ಈ ಬಾರಿ ಫೋಟೋ ಹಂಚಿಕೊಳ್ಳದೇ ಕೇವಲ ಪತ್ರಗಳನ್ನು, ಸಂದೇಶಗಳನ್ನು ಮಾತ್ರ ಬರೆದುಕೊಂಡಿರುವುದು ಅಚ್ಚರಿ ಉಂಟು ಮಾಡಿದೆ.