Select Your Language

Notifications

webdunia
webdunia
webdunia
webdunia

ಬಿಹಾರದಲ್ಲಿ ಎಕ್ಸಿಟ್ ಪೋಲ್ ಉಲ್ಟಾ ಆಗಬಹುದು: ಮಲ್ಲಿಕಾರ್ಜುನ ಖರ್ಗೆ

Mallikarjun Kharge

Krishnaveni K

ಬೆಂಗಳೂರು , ಬುಧವಾರ, 12 ನವೆಂಬರ್ 2025 (15:28 IST)
ಪಾಟ್ನಾ: ಬಿಹಾರದಲ್ಲಿ ಎಕ್ಸಿಟ್ ಪೋಲ್ ಉಲ್ಟಾ ಆಗಬಹುದು, ನೋಡೋಣ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದಾರೆ.

ಬಿಹಾರ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿದಿದ್ದು ಇದೀಗ ಫಲಿತಾಂಶದತ್ತ ಎಲ್ಲರ ದೃಷ್ಟಿ ನೆಟ್ಟಿದೆ. ಎಕ್ಸಿಟ್ ಪೋಲ್ ನಲ್ಲಿ ಆಡಳಿತಾರೂಢ ಎನ್ ಡಿಎ ಮೈತ್ರಿ ಕೂಟಕ್ಕೇ ಅಧಿಕಾರ ಸಿಗುವ ಸಾಧ್ಯತೆಯಿದೆ ಎಂದು ಹೇಳುತ್ತಿವೆ. ಬಹುತೇಕ ಎಲ್ಲಾ ಎಕ್ಸಿಟ್ ಪೋಲ್ ಫಲಿತಾಂಶಗಳೂ ಎನ್ ಡಿಎಗೆ ಸ್ಪಷ್ಟ ಬಹುತಮ ಎನ್ನುತ್ತಿವೆ. ಆದರೆ ಎಕ್ಸಿಟ್ ಪೋಲ್ ಫಲಿತಾಂಶಗಳು ಪ್ರತೀ ಬಾರಿಯೂ ನಿಖರವಾಗಿರಬೇಕೆಂದೇನೂ ಇಲ್ಲ. ಇದಕ್ಕೆ ಕಳೆದ ಲೋಕಸಭೆ ಚುನಾವಣೆ ಫಲಿತಾಂಶವೇ ಸಾಕ್ಷಿ.

ಇದರ ಬಗ್ಗೆ ಇಂದು ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ‘ಎಕ್ಸಿಟ್ ಪೋಲ್ ಪ್ರಕಾರ ಎನ್ ಡಿಎ ಗೆ ಬಹುಮತ ಅಂತ ಬರ್ತಾ ಇದೆ. ಮಹಾಘಟಬಂಧನ್ ಗೆ ಅಷ್ಟು ಪ್ರೋತ್ಸಾಹಜನಕ ಇಲ್ಲ. ನೋಡೋಣ. ಇದೇ ರೀತಿಯಾಗಿ ಹರ್ಯಾಣದಲ್ಲಿ ಎಕ್ಸಿಟ್ ಪೋಲ್ ನಲ್ಲಿ ಕಾಂಗ್ರೆಸ್ ಪರವಾಗಿ ಬಹಳ ಎಲ್ಲಾ ಚಾನೆಲ್ ಗಳು ತೋರಿಸಿದ್ರು. ಆದರೆ ಫಲಿತಾಂಶ ಉಲ್ಟಾ ಆಯ್ತು. ಹಾಗಾಗಿ ಇದನ್ನೂ ಕಾದು ನೋಡೋಣ. ನವಂಬರ್ 14 ರಂದು ರಿಸಲ್ಟ್ ಏನಾಗುತ್ತದೆ ನೋಡೋಣ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ಹೊಣೆಗಾರಿಕೆಯಿಲ್ಲದ ಪಲಾಯನವಾದಿ: ಹಳೇ ವಿಡಿಯೋ ಹಂಚಿಕೊಂಡ ಪ್ರಿಯಾಂಕ್ ಖರ್ಗೆ