ಪಾಟ್ನಾ: ಬಿಹಾರ ಚುನಾವಣೆ ಪ್ರಕ್ರಿಯೆಗಳು ಮುಗಿದಿದ್ದು ಇದೀಗ ಫಲಿತಾಂಶಕ್ಕಾಗಿ ಎದಿರು ನೋಡಲಾಗುತ್ತಿದೆ. ಈ ಚುನಾವಣೆ ರಾಹುಲ್ ಗಾಂಧಿ ಪಾಲಿಗೆ ಮಹತ್ವದ್ದಾಗಲಿದೆ. ಈ ಚುನಾವಣೆ ಅವರ ಭವಿಷ್ಯವನ್ನೇ ಬದಲಾಯಿಸಬಹುದು.
ಮತಗಳ್ಳತನದ ಬಗ್ಗೆ ಇತ್ತೀಚೆಗೆ ಹೋರಾಟ ಶುರು ಮಾಡಿರುವ ರಾಹುಲ್ ಗಾಂಧಿಗೆ ಈಗ ಅದರ ಫಲಿತಾಂಶ ಏನಾಗುತ್ತದೆ ಎಂದು ನೋಡಲು ಬಿಹಾರ ಚುನಾವಣೆಯೇ ಪರೀಕ್ಷಾ ವೇದಿಕೆಯಾಗಲಿದೆ. ಈ ಬಾರಿ ಬಿಹಾರದಲ್ಲಿ ಅವರು ಮತಗಳ್ಳತನ ವಿಚಾರವನ್ನೇ ಇಟ್ಟುಕೊಂಡು ಯಾತ್ರೆ ಕೈಗೊಂಡಿದ್ದರು.
ಒಂದು ವೇಳೆ ಈ ಬಾರಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ರಾಹುಲ್ ಮತಗಳ್ಳತನ ಹೋರಾಟವನ್ನು ಮತ್ತಷ್ಟು ದೊಡ್ಡ ಮಟ್ಟಕ್ಕೆ ಕೊಂಡೊಯ್ಯಬಹುದು. ಬಿಹಾರ ಚುನಾವಣೆ ಫಲಿತಾಂಶ ರಾಹುಲ್ ಗಾಂಧಿಗೆ ದೊಡ್ಡ ಬೂಸ್ಟ್ ನೀಡಲಿದೆ.
ಒಂದು ವೇಳೆ ಇಂಡಿಯಾ ಒಕ್ಕೂಟ ಸೋತರೆ ರಾಹುಲ್ ಆಗಲೂ ಮತಗಳ್ಳತನವನ್ನೇ ಕಾರಣ ಮಾಡಬಹುದು ಅಥವಾ ಅದೇ ವಿಚಾರವಾಗಿ ಹೋರಾಟ ಮುಂದುವರಿಸಬಹುದು. ಆದರೆ ಇದರ ಜೊತೆಗೆ ಈಗಾಗಲೇ ಬಿರುಕುಗೊಂಡಿರುವ ಇಂಡಿಯಾ ಒಕ್ಕೂಟ ಮತ್ತಷ್ಟು ಚೂರಾಗುವ ಸಾಧ್ಯತೆಯೂ ಇದೆ. ರಾಹುಲ್ ನಾಯಕತ್ವದ ಬಗ್ಗೆ ಮತ್ತೆ ಪ್ರಶ್ನೆಗಳು ಮೂಡಬಹುದು. ಹೀಗಾಗಿ ಬಿಹಾರ ಚುನಾವಣೆ ಫಲಿತಾಂಶ ರಾಹುಲ್ ಪಾಲಿಗೆ ಮಹತ್ವದ್ದಾಗಲಿದೆ.