ನವದೆಹಲಿ: ದೆಹಲಿಯ ಕೆಂಪು ಕೋಟೆ ಬಳಿ ನಡೆದ ಉಗ್ರರ ದಾಳಿ ಗಮನಿಸಿದರೆ ಭಾರತ ಈಗ ಆಪರೇಷನ್ ಸಿಂಧೂರ್ ಗಿಂತ ಮೊದಲು ಆಪರೇಷನ್ indoor ಮಾಡಬೇಕಿದೆ ಎನಿಸುತ್ತಿದೆ.
ಕಾಶ್ಮೀರದಲ್ಲಿ ಉಗ್ರರ ದಾಳಿಯಾದಾಗ ಆಪರೇಷನ್ ಸಿಂಧೂರ್ ನಡೆಸಿ ಭಾರತೀಯ ಸೈನಿಕರು ಪಾಕಿಸ್ತಾನ ಪ್ರೇರಿತ ಉಗ್ರರನ್ನು ಹೊಡೆದು ಹಾಕಿದ್ದರು. ಆದರೆ ಈಗ ದೆಹಲಿಯಲ್ಲಿ ದಾಳಿ ನಡೆಸಿದ್ದು ದೇಶದೊಳಗಿನ ಶತ್ರುಗಳಿಂದ.
ಗಡಿಯಲ್ಲಿರುವ ಭಯೋತ್ಪಾದಕರಿಗಿಂತ ದೇಶದೊಳಗಿದ್ದುಕೊಂಡೇ ವಿಧ್ವಂಸಕ ಕೃತ್ಯ ನಡೆಸುವವರು ಡೇಂಜರ್ ಎಂದು ಮತ್ತೊಮ್ಮೆ ಇದರಿಂದ ಸಾಬೀತಾಗಿದೆ. ನಿನ್ನೆ ಮಧ್ಯಾಹ್ನ ಇಬ್ಬರು ವೈದ್ಯರನ್ನು ಸೆರೆ ಹಿಡಿದು 2900 ಕೆ.ಜಿ. ಸ್ಪೋಟಕಗಳನ್ನು ವಶಪಡಿಸಿಕೊಂಡಿದ್ದಾರೆ ಎಂದರೆ ಒಳಗಿನ ಭಯೋತ್ಪಾದಕರು ಯಾವ ಮಟ್ಟಿಗೆ ಹಬ್ಬಿಕೊಂಡಿದ್ದಾರೆ ಎಂಬುದು ಅರ್ಥವಾಗುತ್ತದೆ.
ವಿಶೇಷವೆಂದರೆ ವಿದ್ಯಾವಂತರೇ ಇಂತಹ ಕೆಲಸ ಮಾಡುತ್ತಿದ್ದಾರೆ. ಈಗ ದೆಹಲಿಯಲ್ಲಿ ಆತ್ಮಾಹುತಿ ದಾಳಿ ನಡೆಸಿರುವುದೂ ವೈದ್ಯನೇ ಎಂದು ಹೇಳಲಾಗುತ್ತಿದೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಜನರು ಆಪರೇಷನ್ ಸಿಂಧೂರ್ ಗಿಂತ ಮೊದಲು ದೇಶದೊಳಗಿನ ಉಗ್ರರನ್ನು ಸದೆಬಡಿಯಲು ಕೇಂದ್ರ ಸರ್ಕಾರ ತುರ್ತಾಗಿ ಆಪರೇಷನ್ indoor ಮಾಡಬೇಕು ಎಂದು ಜನ ಅಭಿಪ್ರಾಯಪಡುತ್ತಿದ್ದಾರೆ.