ಬೆಂಗಳೂರು: ಚುನಾವಣೆ ವೇಳೆಯೇ ಬಾಂಬ್ ಸ್ಪೋಟವಾಗುತ್ತದೆ. ಇದಕ್ಕೆ ಕೇಂದ್ರವೇ ಉತ್ತರ ಕೊಡಬೇಕು ಎಂದು ಸಿಎಂ ಸಿದ್ದರಾಮಯ್ಯ ಇಂದು ಹೇಳಿಕೆ ನೀಡಿದ್ದಾರೆ.
ದೆಹಲಿ ಸ್ಪೋಟದ ಬಗ್ಗೆ ಮಾಧ್ಯಮ ಪ್ರತಿನಿಧಿಯೊಬ್ಬರು ಚುನಾವಣೆ ವೇಳೆಯೇ ಬಾಂಬ್ ಬ್ಲಾಸ್ಟ್ ಆಗುವುದರ ಬಗ್ಗೆ ಕಾಂಗ್ರೆಸ್ ನ ಹಿರಿಯ ನಾಯಕರಾಗಿ ನಿಮ್ಮ ಅಭಿಪ್ರಾಯವೇನು ಎಂದು ಸಿದ್ದರಾಮಯ್ಯನವರನ್ನು ಕೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಅವರು ನೋಡಿ ಬಾಂಬ್ ಬ್ಲಾಸ್ಟ್ ಆಗಬಾರದು. ಎಷ್ಟೇ ಜನ ಸತ್ತಿರಲಿ ಜನರು ಪ್ರಾಣ ಕಳೆದುಕೊಳ್ಳುವುದು ಇದ್ಯಲ್ಲಾ ಆದು ಆಗಬಾರದು. ಚುನಾವಣೆ ಸಂದರ್ಭದಲ್ಲಿ ಆಗಿರುವುದು ಯಾಕೆ ಎಂದು ನೋಡಬೇಕು. ಈ ತನಿಖೆ ಮಾಡಲಿ. ಚುನಾವಣೆ ಸಂದರ್ಭದಲ್ಲಿಯೇ ಬ್ಲಾಸ್ಟ್ ಆಗಿರುವುದರಿಂದ ಇದರ ಪರಿಣಾಮ ಚುನಾವಣೆ ಮೇಲೂ ಆಗಬಾರದು ಎಂದಿಲ್ಲ ಎಂದಿದ್ದಾರೆ.
ಇದು ಭದ್ರತಾ ವೈಫಲ್ಯದಿಂದಾಗಿ ಆಗಿದೆಯಾ ಎನ್ನುವುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಭದ್ರತಾ ವೈಫಲ್ಯ ಆಗಿದೆಯಾ ಎನ್ನುವುದನ್ನು ತನಿಖೆಯಿಂದಲೇ ತಿಳಿಯಬೇಕು.