ಬೆಂಗಳೂರು: ದೆಹಲಿ ಸ್ಪೋಟಕ್ಕೂ ಪರಪ್ಪನ ಅಗ್ರಹಾರ ಜೈಲಿನಿಂದಲೇ ಮೊಬೈಲ್ ಬಳಸುತ್ತಿದ್ದ ಉಗ್ರನಿಗೂ ಸಂಬಂಧವಿರಬಹುದು ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ದೆಹಲಿ ಸ್ಪೋಟದ ಬಗ್ಗೆ ಪ್ರತಿಕ್ರಿಯಿಸಿರುವ ಆರ್ ಅಶೋಕ್, ಪರಪ್ಪನ ಅಗ್ರಹಾರ ಜೈಲಿನಿಂದಲೇ ಬಿಂದಾಸ್ ಆಗಿ ಉಗ್ರರು ಮೊಬೈಲ್ ಬಳಸುತ್ತಿದ್ದರು. ಪರಪ್ಪನ ಅಗ್ರಹಾರದಲ್ಲಿ ಉಗ್ರ ಸ್ಮಾರ್ಟ್ ಫೋನ್ ಬಳಿಕೆ ಮಾಡಿದ್ದಕ್ಕೂ ಸ್ಪೋಟಕ್ಕೂ ಲಿಂಕ್ ಇರಬಹುದು ಎಂದು ಮೇಲ್ನೋಟಕ್ಕೆ ಅನಿಸುತ್ತದೆ.
ಇದೆಲ್ಲಾ ಆಗಬೇಕಾದರೆ ಆ ಉಗ್ರರಿಗೆ ದೊಡ್ಡ ಲಿಂಕ್ ಇರಬೇಕು. ಆ ಲಿಂಕ್ ತನಿಖೆಯಾಗಬೇಕು. ಕೇಂದ್ರ ಸರ್ಕಾರ ಮಾರ್ಗಸೂಚಿ ನೀಡುವ ಮೂಲಕ ತನ್ನ ಕರ್ತವ್ಯ ಮಾಡಿದೆ. ಆದರೆ ರಾಜ್ಯ ಸರ್ಕಾರ ಅದನ್ನು ಪಾಲನೆ ಮಾಡಬೇಕಲ್ವಾ?
ನನಗೆ ಅನಿಸುವ ಪ್ರಕಾರ ಈ ಸರ್ಕಾರದಿಂದ ಅದನ್ನು ಯಾವುದನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಯಾಕೆಂದರೆ ಕಳೆದ ಆರು ತಿಂಗಳಿನಿಂದ ಸರ್ಕಾರ ಇದ್ಯೋ ಸತ್ತಿದ್ಯೋ ಎನ್ನೋದೇ ಗೊತ್ತಿಲ್ಲ ಎಂದು ಅಶೋಕ್ ವ್ಯಂಗ್ಯ ಮಾಡಿದ್ದಾರೆ.