ದೆಹಲಿ: ನಿನ್ನೆ ಸಂಜೆ ದೆಹಲಿಯ ಕೆಂಪು ಕೋಟೆ ಬಳಿ ಸ್ಪೋಟ ನಡೆಸಿದ ವ್ಯಕ್ತಿಯ ಬಗ್ಗೆ ಮಹತ್ವದ ಮಾಹಿತಿ ಬಂದಿದೆ. ಸ್ಪೋಟಕ್ಕೆ ಕೆಲವೇ ತಾಸು ಮೊದಲು ಉಗ್ರ ಸಂಘಟನೆಗೆ ಸೇರಿದ ಇಬ್ಬರನ್ನು ಸ್ಪೋಟಕಗಳ ಸಮೇತ ಬಂಧಿಸಿದ ಬಳಿಕ ದಾಳಿ ನಡೆದಿತ್ತು.
ನಿನ್ನೆ ಕಾಶ್ಮೀರ, ಹರ್ಯಾಣದಲ್ಲಿ ಸಕ್ರಿಯವಾಗಿದ್ದ ವೈಟ್ ಕಾಲರ್ ಉಗ್ರರಿಬ್ಬರನ್ನು ಸೆರೆ ಹಿಡಿಯಲಾಗಿತ್ತು. ಡಾ ಆದಿಲ್ ಮತ್ತು ಡಾ ಮುಜಮ್ಮಿಲ್ ಎಂಬಿಬ್ಬರು ಉಗ್ರರನ್ನು ಸೆರೆ ಹಿಡಿಯಲಾಗಿತ್ತು. ಜೊತೆಗೆ 2900 ಕೆ.ಜಿ. ಸ್ಪೋಟಕ ವಶಪಡಿಸಿಕೊಳ್ಳಲಾಗಿತ್ತು.
ಇದಾದ ಕೆಲವೇ ತಾಸುಗಳಲ್ಲಿ ದೆಹಲಿಯಲ್ಲಿ ಸ್ಪೋಟ ನಡೆದಿದೆ. ಐ20 ಕಾರಿನಲ್ಲಿ ಡಾ ಉಮರ್ ಯು ನಬಿ ಎಂಬಾತ ಸೂಸೈಡ್ ಬಾಂಬರ್ ಆಗಿ ಸ್ಪೋಟಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಇಬ್ಬರು ವೈದ್ಯ ಉಗ್ರರನ್ನು ಸೆರೆ ಹಿಡಿದ ಸೇಡಿಗೆ ಈ ಕೃತ್ಯವೆಸಗಿರಬಹುದು ಎಂದು ಶಂಕಿಸಲಾಗಿದೆ.
ಇದೀಗ ಸ್ಥಳದಲ್ಲಿ ಪತ್ತೆಯಾದ ಕೈಗಳನ್ನು ಪೊಲೀಸರು ಡಿಎನ್ಎ ಪರೀಕ್ಷೆಗೊಳಪಡಿಸುತ್ತಿದ್ದಾರೆ. ಇದು ಆತ್ಮಾಹುತಿ ಬಾಂಬರ್ ನದ್ದೇ ಕೈಗಳಿರಬಹುದು ಎಂದು ಶಂಕಿಸಲಾಗಿದೆ.