ನವದೆಹಲಿ: ನಿನ್ನೆ ಸಂಜೆ ದೆಹಲಿಯಲ್ಲಿ ಕಾರು ಸ್ಪೋಟವಾಗಿ ಆತಂಕದ ವಾತಾವರಣವಿದೆ. ಇದರ ನಡುವೆ ಪ್ರಧಾನಿ ಮೋದಿ ಇಂದು ಭೂತಾನ್ ಪ್ರವಾಸ ಮಾಡುತ್ತಿದ್ದಾರೆ. ಇದಕ್ಕೆ ನೆಟ್ಟಿಗರು ಕಿಡಿ ಕಾರಿದ್ದಾರೆ. ಇಂಥಾ ಸಮಯದಲ್ಲಿ ವಿದೇಶ ಪ್ರವಾಸ ಬೇಕಿತ್ತಾ ಎಂದಿದ್ದಾರೆ.
ಒಂದೆಡೆ ದೆಹಲಿ ಸ್ಪೋಟದಿಂದ 8 ಜನ ಸಾವನ್ನಪ್ಪಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿಯಿದೆ. ಇದರ ನಡುವೆ ಪ್ರಧಾನಿ ಮೋದಿ ಇಂದಿನಿಂದ ಎರಡು ದಿನಗಳ ಕಾಲ ಭೂತಾನ್ ಪ್ರವಾಸ ಮಾಡಲಿದ್ದು, ಅಲ್ಲಿ ಜಲ ವಿದ್ಯುತ್ ಯೋಜನೆ ಉದ್ಘಾಟನೆ ಮಾಡಲಿದ್ದಾರೆ.
ಭೂತಾನ್ ರಾಜ ಜಿಗ್ಮೆ ಸಿಂಘೆ ವಾಂಗ್ ಚುಕ್ ಅವರ 70 ನೇ ಜನ್ಮದಿನದ ಸಂಭ್ರಮಾಚರಣೆಯಲ್ಲಿ ಅವರು ಭಾಗಿಯಾಗಲಿದ್ದಾರೆ. ಆದರೆ ಮೋದಿ ಈ ವಿದೇಶ ಪ್ರವಾಸದ ಬಗ್ಗೆ ಮೋದಿ ಟ್ವೀಟ್ ಮಾಡಿದ್ದು ಇದಕ್ಕೆ ನೆಟ್ಟಿಗರು ಟೀಕೆ ಮಾಡಿದ್ದಾರೆ.
ನಿಮ್ಮ ವಿದೇಶ ಪ್ರವಾಸದ ಸಮಯ ಸರಿಯಿಲ್ಲ. ನಮ್ಮ ರಾಷ್ಟ್ರ ರಾಜಧಾನಿಯಲ್ಲೇ ಸ್ಪೋಟ ಸಂಭವಿಸಿರುವಾಗ ವಿದೇಶ ಪ್ರವಾಸ ಬೇಕಿತ್ತಾ? ಎಂದು ಪ್ರಶ್ನೆ ಮಾಡಿದ್ದಾರೆ. ಈ ಹಿಂದೆ ಪಹಲ್ಗಾಮ್ ನಲ್ಲಿ ದಾಳಿಯಾದಾಗ ಸೌದಿ ಪ್ರವಾಸ ಅರ್ಧಕ್ಕೇ ಮೊಟಕುಗೊಳಿಸಿ ಭಾರತಕ್ಕೆ ಬಂದಿದ್ದಿರಿ. ಈಗ ಭೂತಾನ್ ಪ್ರವಾಸ ಮೊಟಕುಗೊಳಿಸಬಹುದಿತ್ತಲ್ವಾ? ಎಂದು ಪ್ರಶ್ನೆ ಮಾಡಿದ್ದಾರೆ.