ದೆಹಲಿ: ನಿನ್ನೆ ಸಂಜೆ ದೆಹಲಿಯಲ್ಲಿ ಸಂಭವಿಸಿದ ಸ್ಪೋಟದ ಬೆನ್ನಲ್ಲೇ ಈಗ ಇದಕ್ಕೆ ಕಾರಣವೇನು ಎಂಬ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿಗರ ನಡುವೆ ಕೆಸರೆರಚಾಟ ಶುರುವಾಗಿದೆ.
ನಿನ್ನೆ ಕೆಂಪು ಕೋಟೆಯ ಬಳಿ ಕಾರು ಸ್ಪೋಟಗೊಂಡ ಪರಿಣಾಮ ಹಲವರು ಸಾವನ್ನಪ್ಪಿದ್ದು ಸಾಕಷ್ಟು ಮಂದಿಗೆ ಗಾಯಗಳಾಗಿವೆ. ಹತ್ತಿರದ ವಾಹನಗಳು, ಅಂಗಡಿ ಮುಂಗಟ್ಟುಗಳು ಜಖಂಗೊಂಡಿದೆ. ಘಟನೆಯ ವಿಡಿಯೋಗಳನ್ನು ನೋಡಿದರೆ ಎದೆ ಝಲ್ಲೆನಿಸುವಂತಿದೆ.
ಇದರ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಕೆಸರೆರಚಾಟ ಶುರುವಾಗಿದೆ. ಮೋದಿ, ಅಮಿತ್ ಶಾ ಮೂಗಿನಡಿಯಲ್ಲೇ ಕೃತ್ಯ ನಡೆಯಲು ಹೇಗೆ ಸಾಧ್ಯವಾಯಿತು? ಇದಕ್ಕೆಲ್ಲಾ ಇವರೇ ಉತ್ತರ ಕೊಡಬೇಕು. ಇನ್ನೆಷ್ಟು ನೆತ್ತರು ನೋಡಬೇಕು ಎಂದು ಕೆಲವರು ಟೀಕಿಸಿದ್ದಾರೆ.
ಇನ್ನು, ಕೆಲವರು ಭಯೋತ್ಪಾದನೆಗೆ ಧರ್ಮವಿಲ್ಲ ಎನ್ನುತ್ತಾರೆ, ಆದರೆ ಭಯೋತ್ಪಾದನೆಗೆ ಒಂದೇ ಧರ್ಮವಿರುವುದು ಅದು ಇಸ್ಲಾಂ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ದೆಹಲಿ ಬ್ಲಾಸ್ಟ್ ಗೆ ಕಾರಣವೇನೆಂದು ಸರಿಯಾದ ತನಿಖೆಯಾಗುವ ಮೊದಲೇ ಸೋಷಿಯಲ್ ಮೀಡಿಯಾದಲ್ಲಿ ಆರೋಪ-ಪ್ರತ್ಯಾರೋಪಗಳ ಹಲ್ ಚಲ್ ಜೋರಾಗಿದೆ.