ಮೈಲಾಡುತುರೈ: ತಮಿಳುನಾಡಿನ ಒಟ್ಟು 14 ಮೀನುಗಾರರನ್ನು ಅಂತಾರಾಷ್ಟ್ರೀಯ ಸಮುದ್ರ ಗಡಿ ರೇಖೆದಾಟಿ ಶ್ರೀಲಂಕಾದ ಜಲಪ್ರದೇಶದ ಅನಲೈತಿವು ಬಳಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಶ್ರೀಲಂಕಾ ನೌಕಾಪಡೆ ಅರೆಸ್ಟ್ ಮಾಡಿದೆ.
ಇಂದು ಬೆಳಗಿನ ಜಾವ ಮೈಲಾಡುತುರೈನ 13 ಮೀನುಗಾರರು ಮತ್ತು ಕಡಲೂರಿನ ಒಬ್ಬರು ಮೀನುಗಾರರನ್ನು ಬಂಧಿಸಲಾಗಿದೆ.
ಬಂಧಿತ ಮೀನುಗಾರರ ಮಾಹಿತಿ ಇಲ್ಲಿದೆ. ರಾಜೇಂದ್ರನ್ (32), ಶಿವದಾಸ್ (20), ಕುಲಂಡೈವೇಲ್ (27), ರಂಜಿತ್ (30), ರಾಜ್ (30), ಕಲೈ (30), ಗುಗನ್ (28), ಪ್ರಸಾದ್ (32), ಅಕಿಲನ್ (27), ಆಕಾಶ್ (27), ರಾಬಿನ್ (29), ರಾಜ್‌ಕುಮಾರ್ (30), ಮೈಲಾಡುತುರೈನ ಗೋವಿಂದ (40) ಮತ್ತು ಕಡಲೂರಿನ ಬಾರತಿ (40) ಎಂದು ಗುರುತಿಸಲಾಗಿದೆ.
ಇಂದು ಬೆಳಿಗ್ಗೆ ಅನಲೈತಿವು ಬಳಿಯ ನೀರಿನಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ, ಶ್ರೀಲಂಕಾ ನೌಕಾಪಡೆ ಅವರ ಹಡಗನ್ನು ತಡೆದು ಎಲ್ಲಾ 14 ಮೀನುಗಾರರನ್ನು ವಶಕ್ಕೆ ಪಡೆದಿದೆ.