ಬೆಂಗಳೂರು: ದಿವಂಗತ ಜಯಲಲಿತಾ ಅವರ ಆಸ್ತಿಯನ್ನು ತಮಿಳುನಾಡು ಸರ್ಕಾರ ಕರ್ನಾಟಕದಿಂದ ವಾಪಸ್ ಪಡೆಯಲಿದೆ. 27 ಕಿಲೋ ಚಿನ್ನ, ವಜ್ರಾಭರಣಗಳು, ರತ್ನದ ಕಲ್ಲುಗಳು, 601 ಕೆಜಿ ಬೆಳ್ಳಿ, 10,000 ಸೀರೆಗಳು, 750 ಜೋಡಿ ಪಾದರಕ್ಷೆಗಳು ತಮಿಳುನಾಡು ಸರ್ಕಾರಕ್ಕೆ ಹಿಂದಿರುಗಲಿವೆ.
ಬೆಂಗಳೂರಿನ ನ್ಯಾಯಾಲಯದ ಅಧಿಕಾರಿಗಳು ಅಕ್ರಮ ಆಸ್ತಿ ಪ್ರಕರಣದ ಆಸ್ತಿ ಮತ್ತು ದಾಖಲೆಗಳನ್ನು ತಮಿಳುನಾಡು ಸರ್ಕಾರದ ಅಧಿಕಾರಿಗಳಿಗೆ ಹಿಂದಿರುಗಿಸಿದ್ದಾರೆ.
10,000 ಸೀರೆಗಳು, 750 ಜೋಡಿ ಶೂಗಳು, 27 ಕೆಜಿ ಚಿನ್ನ, ವಜ್ರಾಭರಣಗಳು, ರತ್ನದ ಕಲ್ಲುಗಳು, 601 ಕೆಜಿ ಬೆಳ್ಳಿ, 1672 ಕೃಷಿ ಭೂಮಿ ದಾಖಲೆಗಳು, ವಸತಿ ದಾಖಲೆಗಳು, 8376 ಪುಸ್ತಕಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಾಗಿಸಲು ತಮಿಳುನಾಡು ಅಧಿಕಾರಿಗಳು ಆರು ದೊಡ್ಡ ಟ್ರಂಕ್‌ಗಳನ್ನು ಭಾರೀ ಭದ್ರತೆಯಲ್ಲಿ ತಂದಿದ್ದಾರೆ.
2004ರಲ್ಲಿ ದಿವಂಗತ ಮುಖ್ಯಮಂತ್ರಿಯವರ ಆಸ್ತಿ ಕಬಳಿಕೆ ಪ್ರಕರಣವನ್ನು ತಮಿಳುನಾಡಿನಿಂದ ಕರ್ನಾಟಕಕ್ಕೆ ವರ್ಗಾಯಿಸಿದಾಗ, ಅಧಿಕಾರಿಗಳು ಆಸ್ತಿ ಮತ್ತು ದಾಖಲೆಗಳನ್ನು ತಂದು ರಕ್ಷಿಸಿದರು.
ಆಂತರಿಕ ಮೂಲಗಳ ಪ್ರಕಾರ ಆಸ್ತಿಯ ಮೌಲ್ಯ 4000 ಕೋಟಿ ಎಂದು ಹೇಳಲಾಗಿದೆ. ಆದರೆ ಅಂಕಿಅಂಶ ಅನಧಿಕೃತವಾಗಿದೆ. ಜನವರಿ, 2025 ರಲ್ಲಿ, ಕರ್ನಾಟಕ ಹೈಕೋರ್ಟ್ ಜಪ್ತಿ ಮಾಡಿದ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಕಾನೂನು ಉತ್ತರಾಧಿಕಾರಿಗಳಾದ ಜೆ ದೀಪಾ ಮತ್ತು ಜೆ ದೀಪಕ್ ಅವರ ಮನವಿಯನ್ನು ವಜಾಗೊಳಿಸಿತು.