ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ಸರ್ವೇ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡ ಮಾಡಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಇರುವ ಬಾಡಿಗೆ ಮನೆಯಲ್ಲಿ ಗುಬ್ಬಿ ಮೂಲದ ಶಿವಕುಮಾರ್ (45) ಆತ್ಮಹತ್ಯೆ ಶರಣಾದ ಅಧಿಕಾರಿ.
ಈ ಪ್ರಕರಣ ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಶಿವಕುಮಾರ್ ಅವರು ಮೂಡಿಗೆರೆ ಸರ್ವೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಚಿಕ್ಕಮಗಳೂರು ನೌಕರರ ಸಂಘದ ನಿರ್ದೇಶಕನಾಗಿದ್ದರು.
ಕಳೆದ 10 ವರ್ಷಗಳಿಂದ ಬಳಸುತ್ತಿದ್ದ ಸಿಮ್ ಅನ್ನು ಚೇಂಜ್ ಮಾಡಿ ಶಿವಕುಮಾರ್ ಅವರು ನಿನ್ನೆಯಷ್ಟೇ ಹೊಸ ಸಿಮ್ ಖರೀದಿ ಮಾಡಿದ್ದರು.
ಸದ್ಯ ಸರ್ವೆ ಅಧಿಕಾರಿಯ ಆತ್ಮಹತ್ಯೆ ಅನುಮಾನಕ್ಕೆ ಕಾರಣವಾಗಿದೆ. ಪೊಲೀಸರು ಮನೆ ಬಳಿ ಯಾರನ್ನೂ ಬಿಡದೆ ಬ್ಯಾರಿಕೇಡ್ ಹಾಕಿ, ತನಿಖೆಯನ್ನು ಆರಂಭಿಸಿದ್ದಾರೆ.