Select Your Language

Notifications

webdunia
webdunia
webdunia
webdunia

ಜನಾಕ್ರೋಶದ ಬೆನ್ನಲ್ಲೇ ತುರ್ತು ಸುದ್ದಿಗೋಷ್ಠಿ ಕರೆದ ಮೆಟ್ರೊ ವ್ಯವಸ್ಥಾಪಕರು

BMRCL

Krishnaveni K

ಬೆಂಗಳೂರು , ಗುರುವಾರ, 13 ಫೆಬ್ರವರಿ 2025 (13:37 IST)
Photo Credit: X
ಬೆಂಗಳೂರು: ನಮ್ಮ ಮೆಟ್ರೊ ಪ್ರಯಾಣ ದರ ದಿಡೀರ್ ಆಗಿ ದುಪ್ಪಟ್ಟು ಮಾಡಿರುವುದರಿಂದ ಭಾರೀ ಜನಾಕ್ರೋಶ ಕಂಡುಬಂದಿರುವ ಹಿನ್ನಲೆಯಲ್ಲಿ ಮೆಟ್ರೊ ವ್ಯವಸ್ಥಾಪಕರು ಇಂದು ತುರ್ತು ಸುದ್ದಿಗೋಷ್ಠಿ ಕರೆದಿದ್ದಾರೆ.

ಇನ್ನು ಕೆಲವೇ ಕ್ಷಣಗಳಲ್ಲಿ ಬಿಎಂಆರ್ ಸಿಎಲ್ ಎಂಡಿ ಮಹೇಶ್ವರ ರಾವ್ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ  ವೇಳೆ ಮೆಟ್ರೊ ದರ ಇಳಿಕೆ ಬಗ್ಗೆ ಘೋಷಣೆ ಮಾಡಬಹುದೇ ಎಂದು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ.

ಮೆಟ್ರೊ ದೈನಂದಿನ ಟಿಕೆಟ್ ಜೊತೆಗೆ ವಾರದ, ಮಾಸಿಕ ಪಾಸ್ ಗಳ ದರವೂ ದುಪ್ಪಟ್ಟಾಗಿದೆ. ಇದರಿಂದಾಗಿ ಜನ ಮೆಟ್ರೊಗೆ ಹಿಡಿಶಾಪ ಹಾಕುತ್ತಿದ್ದಾರೆ. ಜನಾಕ್ರೋಶದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಮೆಟ್ರೊ ಅಧಿಕಾರಿಗಳ ದರ ಇಳಿಕೆ ಮಾಡುವಂತೆ ಸೂಚನೆ ನೀಡಿದ್ದರು.

ಇದರ ಬೆನ್ನಲ್ಲೇ ಈಗ ಮಹೇಶ್ವರ ರಾವ್ ಪತ್ರಿಕಾಗೋಷ್ಠಿ ಕರೆದಿದ್ದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಮೆಟ್ರೊ ದರ ಏರಿಕೆಯಾಗಿರುವುದರಿಂದ ಸಾಕಷ್ಟು ಜನ ಮೆಟ್ರೊಗೆ ಗುಡ್ ಬೈ ಹೇಳಿ ಬಸ್, ಸ್ವಂತ ವಾಹನಗಳ ಮೊರೆ ಹೋಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಿಷಭ್ ಪಂತ್ ಜೀವ ಉಳಿಸಿದ್ದ ವ್ಯಕ್ತಿ ಪ್ರಿಯತಮೆಯೊಂದಿಗೆ ಆತ್ಮಹತ್ಯೆಗೆ ಯತ್ನ: ಪ್ರೇಯಸಿ ಸಾವು