ಚಾಮರಾಜನಗರ: ಪ್ರೀತಿ ಹೆಸರಿಲಿನಲ್ಲಿ ನಾಟಕವಾಡಿ ಮದುವೆ ದಿನವೇ ಪ್ರಿಯತಮ ಪರಾರಿಯಾದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
2021ರಲ್ಲಿ ನರ್ಸಿಂಗ್ ಕೋರ್ಸ್ ಮಾಡುವ ವೇಳೆ ಯುವತಿಗೆ ಕ್ಲಿಂಟನ್ ಎಂಬಾತ ಪರಿಚಯವಾಗಿದ್ದಾನೆ. ಇಬ್ಬರ ಸ್ನೇಹ ಪ್ರೀತಿಗೆ ತಿರುಗಿದ್ದು, ಈ ವಿಷಯ ಇಬ್ಬರ ಮನೆಯವರಿಗೂ ಗೊತ್ತಾಗಿತ್ತು. ಯುವತಿ ಮನೆಯವರ ಕ್ಲಿಂಟನ್ ಬಳಿ ಮದುವೆಯಾಗುವಂತೆ ಒತ್ತಾಯ ಮಾಡಿದ್ದಾರೆ. ಆದರೆ ಆತನಿಗೆ ಒಬ್ಬಳು ಸಹೋದರಿ ಇದ್ದ ಕಾರಣ, ಆಕೆಯ ಮದುವೆ ನಂತರ ಕ್ಲಿಂಟನ್ ಜತೆಗೆ ಮದುವೆ ಮಾಡಿಸುವುದಾಗಿ ಆತನ ಮನೆಯವರು ಹೇಳಿದ್ದಾರೆ.
ಆದರೆ ಯುವತಿ ಮನೆಯವರು ಎರಡು ವರ್ಷ ಕಾಯಲು ಸಾಧ್ಯವಿಲ್ಲವೆಂದು ಆಕೆಗೆ ಬೇರೆಯವರ ಜತೆ ಮದುವೆ ಮಾಡಿದ್ದಾರೆ. ಮದುವೆ ಬಳಿಕ ಕ್ಲಿಂಟನ್ ಆಕೆಯ ಪತಿಗೆ ತಮ್ಮಿಬ್ಬರ ಖಾಸಗಿ ಪೋಟೋಗಳನ್ನು ಕಳುಹಿಸಿದ್ದಾನೆ. ಇದರಿಂದ ಆಕೆಯನ್ನು ಮನೆಯಿಂದ ಪತಿಯ ಮನೆಯವರು ಹೊರಹಾಕಿದ್ದರು.
ಇದಾದ ಬಳಿಕ ಕ್ಲಿಂಟನ್ ಯುವತಿಗೆ ನಾನು ನಿನ್ನೊಂದಿಗೆ ಮದುವೆಯಾಗುತ್ತೇನೆ. ಆತನಿಗೆ ವಿಚ್ಛೇದನ ನೀಡು ಎಂದಿದ್ದಾನೆ. ಕಳೆದ 10ತಿಂಗಳಿನಿಂದ ಇಬ್ಬರು ಒಟ್ಟಿಗೆ ಇದ್ದರು. ಇದೀಗ ರಿಜಿಸ್ಟರ್ ಮದುವೆ ದಿವಸ ಕ್ಲಿಂಟನ್ ಮೊಬೈಲ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿದ್ದಾನೆ. ವಿಚಿತ್ರ ಹಾಗೂ ವಿಲಕ್ಷಣ ಪ್ರೇಮ್ ಕಹಾನಿಗೆ ಬಲಿಯಾಗಿ ಪ್ರಿಯತಮೆ ಹಾಗೂ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಯುವತಿ ಜತೆ ಲೈಂಗಿಕ ಸಂಪರ್ಕ ಬೆಳೆಸಿ 3 ಬಾರಿ ಅಬಾರ್ಷನ್ ಕೂಡ ಮಾಡಿಸಿದ್ದಾನೆ ಎಂದು ಯುವತಿ ದೂರಿದ್ದಾಳೆ. ಪರಾರಿಯಾದ ಕ್ಲಿಂಟನ್ ನ ಹುಡುಕಿಕೊಡಿ ಎಂದು ನೊಂದ ಪ್ರಿಯತಮೆಯ ಕಣ್ಣೀರಿಟ್ಟಿದ್ದಾಳೆ.