ಬೆಂಗಳೂರು: ಕರ್ನಾಟಕದಲ್ಲಿ ಇತ್ತೀಚೆಗೆ ಎಲ್ಲವೂ ದುಬಾರಿಯಾಗುತ್ತಿದೆ. ಇದೀಗ ಜನನ ಪ್ರಮಾಣ ಪತ್ರವೂ ದುಬಾರಿಯಾಗಿದೆ. ಮೊದಲು ಜನನ ಪ್ರಮಾಣ ಪತ್ರ ಮಾಡಿಸಲು ಎಷ್ಟು ಶುಲ್ಕವಿತ್ತು ಈಗ ಎಷ್ಟಾಗಿದೆ ಇಲ್ಲಿದೆ ವಿವರ.
ಹುಟ್ಟುವ ಪ್ರತಿಯೊಂದು ಮಗುವೂ ಜನನ ಪ್ರಮಾಣ ಪತ್ರ ಮಾಡಿಸುವುದು ಕಡ್ಡಾಯ. ಹುಟ್ಟಿದ ಆಸ್ಪತ್ರೆಯಲ್ಲೇ ಜನನ ಪ್ರಮಾಣ ಪತ್ರಕ್ಕೆ ಅರ್ಜಿ ಸಿಗುತ್ತದೆ. ಅದನ್ನು ಭರ್ತಿ ಮಾಡಿ ಕೊಡಬೇಕು. ಇತ್ತೀಚೆಗಿನ ದಿನಗಳಲ್ಲಿ ಎಲ್ಲಾ ಸೌಲಭ್ಯಗಳನ್ನು ಪಡೆಯಲೂ ಜನನ ಪ್ರಮಾಣ ಪತ್ರ ಅಗತ್ಯವಾಗಿದೆ.
ಆದರೆ ಈ ಮೊದಲು ಜನನ ಪ್ರಮಾಣ ಪತ್ರ ಪಡೆಯಲು ಕೇವಲ 5 ರೂ. ಶುಲ್ಕವಿತ್ತು. ಆದರೆ ಅದನ್ನು ಈಗ ನವೀಕರಿಸಲಾಗಿದ್ದು ಒಂದೇ ಸಮ 10 ಪಟ್ಟು ಹೆಚ್ಚು ಮಾಡಲಾಗಿದೆ. ಅಂದರೆ ಈ ಮೊದಲು 5 ರೂ.ಗಳಿದ್ದ ಪ್ರಮಾಣ ಪತ್ರಕ್ಕೆ ಈಗ 50 ರೂ. ಆಗಿದೆ.
ಕರ್ನಾಟಕ ಜನನ, ಮರಣ ನೋಂದಣಿ ನಿಯಮ ತಿದ್ದುಪಡಿ ಮಾಡಲಾಗಿದ್ದು ಶುಲ್ಕವನ್ನೂ ಹೆಚ್ಚಿಸಲಾಗಿದೆ. ಜನನ ಪ್ರಮಾಣ ಪತ್ರ ಈ ಮೊದಲು ಕಡಿಮೆ ಮೊತ್ತದಲ್ಲಿ ಮಾಡಲಾಗುತ್ತಿತ್ತು. ಆದರೆ ಈಗ ಅದನ್ನೂ ಏರಿಕೆ ಮಾಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.