ಬೆಂಗಳೂರು: ರಾಜ್ಯದಲ್ಲಿ ಈಗ ಬೇಸಿಗೆ ಮತ್ತು ಚಳಿಗಾಲದ ನಡುವೆ ಕಣ್ಣಾಮುಚ್ಚಾಲೆ ನಡೆಯುತ್ತಿದೆ. ಇಂದಿನ ಹವಾಮಾನ ಬದಲಾವಣೆಯನ್ನು ತಪ್ಪದೇ ಗಮನಿಸಿ.
ಕಳೆದ ಎರಡು ವಾರದಿಂದ ರಾಜ್ಯದಲ್ಲಿ ಬಿಸಿಲಿನ ಝಳ ಹೆಚ್ಚಿದೆ. ಆದರೆ ರಾತ್ರಿ ವೇಳೆ ತಂಪು ವಾತಾವರಣವಿತ್ತು. ಇದರಿಂದಾಗಿ ಚಳಿ ಮತ್ತು ಸೆಖೆ ನಡುವೆ ಕಣ್ಣಾಮುಚ್ಚಾಲೆಯೇ ನಡೆಯುತ್ತಿತ್ತು. ಆದರೆ ಇಂದಿನಿಂದ ವಾತಾವರಣದಲ್ಲಿ ಮತ್ತೆ ಬದಲಾವಣೆ ಕಾಣಬಹುದು.
ಬೆಳಗ್ಗಿನ ಹೊತ್ತು ಸ್ವಲ್ಪ ತಂಪಾದ ವಾತಾವರಣವಿದ್ದರೂ ಇಂದಿನಿಂದ ಬಿಸಿಲಿನ ಬೇಗೆ ಹೆಚ್ಚಾಗಲಿದೆ. ಇಂದು ಗರಿಷ್ಠ ತಾಪಮಾನ 32 ರಿಂದ 35 ಡಿಗ್ರಿಯವರೆಗೆ ತಲುಪುವ ನಿರೀಕ್ಷೆಯಿದೆ. ಹಗಲು ಶುಭ್ರ ಆಕಾಶವಿರಲಿದ್ದು, ವಿಪರೀತ ಬಿಸಿಲಿನ ಝಳ ಕಂಡುಬರಲಿದೆ.
ನಿನ್ನೆಯೂ ಗರಿಷ್ಠ ತಾಪಮಾನ 35 ಡಿಗ್ರಿಯಷ್ಟು ತಲುಪಿತ್ತು. ಇಂದೂ ಕೂಡಾ ಅದೇ ವಾತಾವರಣವಿರಲಿದೆ. ಜೊತೆಗೆ ರಾತ್ರಿ ಚಳಿಯ ವಾತಾವರಣ ಕಡಿಮೆಯಾಗಲಿದೆ. ಮುಂದಿನ ನಾಲ್ಕೈದು ದಿನಗಳವರೆಗೆ ಇದೇ ಹವಾಮಾನ ಮುಂದುವರಿಯಲಿದೆ.