Select Your Language

Notifications

webdunia
webdunia
webdunia
webdunia

ಕರ್ನಾಟಕ ಹವಾಮಾನ: ಈ ವರ್ಷ ಉತ್ತಮ ಮಳೆಯಿರಲಿದೆಯೇ

Karnataka Rain

Krishnaveni K

ಬೆಂಗಳೂರು , ಬುಧವಾರ, 12 ಫೆಬ್ರವರಿ 2025 (08:48 IST)
ಬೆಂಗಳೂರು: ಕರ್ನಾಟಕದಲ್ಲಿ ಈ ವರ್ಷ ಮಳೆಗಾಲ ಮತ್ತು ಚಳಿಗಾಲ ಚೆನ್ನಾಗಿಯೇ ಆಗಿತ್ತು. ಇದೀಗ ಮಳೆಗಾಲ ಹೇಗಿರಲಿದೆ, ಈ ವರ್ಷ ಚೆನ್ನಾಗಿ ಮಳೆಯಾಗಲಿದೆಯೇ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಹವಾಮಾನ ಮುನ್ಸೂಚನೆಗಳ ಪ್ರಕಾರ ಈ ವರ್ಷ ಮೇ ಅಂತ್ಯದಿಂದ ಸೆಪ್ಟೆಂಬರ್ ವರೆಗೆ ಮಳೆಯಾಗುವ ಸಾಧ್ಯತೆಯಿದೆ. ಮೇ ಮೊದಲಾರ್ಧ ವಿಪರೀತ ಬಿಸಿಲು, ಸೆಖೆ ಕಂಡುಬರಲಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಹಿಂದೆಂದೂ ಕಾಣದ ತಾಪಮಾನ ಕಂಡುಬರುವುದು.

ಆದರೆ ಮೇ ಕೊನೆಯ ವಾರದಲ್ಲಿ ಕೊಂಚ ಮಳೆಯಾಗಲಿದ್ದು, ವಾತಾವರಣ ತಿಳಿಯಾಗಬಹುದು. ಜೂನ್ ನಿಂದ ಈ ವರ್ಷ ಸರಿಯಾಗಿ ಮಳೆಗಾಲ ಆರಂಭವಾಗಲಿದೆ. ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಉತ್ತಮ ಮಳೆ ನಿರೀಕ್ಷಿಸಲಾಗಿದೆ.

ಸೆಪ್ಟೆಂಬರ್ ಮತ್ತು ಅಕ್ಟೋಬರ್ ನಲ್ಲಿ ಮಳೆ ಅಬ್ಬರ ಕಡಿಮೆಯಾಗಲಿದೆ. ಆಗಸ್ಟ್ ನಲ್ಲಿ ಕೆಲವೊಂದು ಕಡೆ ನೆರೆ ಉಂಟಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಈ ವರ್ಷ ಬೇಸಿಗೆ ಎಷ್ಟು ತೀವ್ರವಾಗಿರುತ್ತದೋ ಅಷ್ಟೇ ತೀವ್ರವಾಗಿ ಮಳೆಯೂ ನಿರೀಕ್ಷಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

MahakumbhMela 2025: ತ್ರಿವೇಣಿ ಸಂಗಮದಲ್ಲಿ ಈತನಕ ಮಿಂದೆದ್ದ ಭಕ್ತರ ಸಂಖ್ಯೆ ಎಷ್ಟು ಗೊತ್ತಾ