ನವದೆಹಲಿ: ದೆಹಲಿಯ ಕೆಂಪು ಕೋಟೆ ಬಳಿ ಕಾರು ಸ್ಪೋಟಗೊಂಡಿದ್ದು, ಭಾರೀ ಬೆಂಕಿಯಿಂದಾಗಿ ಜನ ಆತಂಕಕ್ಕೀಡಾದ ಘಟನೆ ನಡೆದಿದೆ.
ಕೆಂಪು ಕೋಟೆಯ ಮೆಟ್ರೋ ನಿಲ್ದಾಣ ಗೇಟ್ 1 ರ ಬಳಿ ಸ್ಪೋಟಗೊಂಡಿದೆ. ಒಂದು ಕಾರು ಸ್ಪೋಟಗೊಂಡಿದ್ದು ಅದರ ಬೆಂಕಿಯ ಕೆನ್ನಾಲಗೆಗೆ ಪಕ್ಕದಲ್ಲಿದ್ದ ನಾಲ್ಕೈದು ವಾಹನಗಳಿಗೂ ಬೆಂಕಿ ಹಬ್ಬಿದೆ. ಇದರಿಂದ ಬೆಂಕಿ ಮತ್ತಷ್ಟು ಹಬ್ಬಿದ್ದು ಅಂಗಡಿ ಮುಂಗಟ್ಟುಗಳಿಗೂ ಹಾನಿಯಾಗಿದೆ.
ಸ್ಪೋಟದ ಶಬ್ಧ ಮತ್ತು ಬೆಂಕಿಯ ಕೆನ್ನಾಲಗೆಗೆ ಭಯಗೊಂಡ ಜನ ದಿಕ್ಕಾಪಾಲಾಗಿ ಓಡಿದ್ದಾರೆ. ಘಟನೆಯ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದ್ದು ಜನ ಆತಂಕದಲ್ಲಿರುವುದು ಗಮನಿಸಬಹುದಾಗಿದೆ.
ವಿಷಯ ತಿಳಿಯುತ್ತಿದ್ದಂತೇ ಅಗ್ನಿ ಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕೆಲಸ ಮಾಡಿದೆ. ಇದೀಗ ಬೆಂಕಿ ನಿಯಂತ್ರಣಕ್ಕೆ ಬಂದಿದೆ. ಆದರೆ ಘಟನೆಗೆ ನಿಖರ ಕಾರಣವೇನು ಎಂದು ವಿಧಿ ವಿಜ್ಞಾನ ಪ್ರಯೋಗಾಲಯ ತಂಡ, ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದೆ.