ದೆಹಲಿ ಪೊಲೀಸ್ ಪೇದೆ ಸೋನಿಕಾ ಯಾದವ್ ಅವರು ಆಂಧ್ರಪ್ರದೇಶದಲ್ಲಿ ನಡೆದ ಅಖಿಲ ಭಾರತ ಪೊಲೀಸ್ ವೇಟ್‌ಲಿಫ್ಟಿಂಗ್ ಕ್ಲಸ್ಟರ್ 2025-26ರಲ್ಲಿ ಕಂಚಿನ ಪದಕವನ್ನು ಗೆಲ್ಲುವ ಮೂಲಕ ಆನ್‌ಲೈನ್‌ನಲ್ಲಿ ಸಂಚಲನ ಮೂಡಿಸಿದ್ದಾರೆ. ಇದಕ್ಕೆ ಕಾರಣ ಏನೆಂದರೆ ಆಕೆ ಏಳು ತಿಂಗಳ ಗರ್ಭಿಣಿಯಾಗಿದ್ದು, ಇದೀಗ 145 ಕೆಜಿ ಎತ್ತಿ ಸಾಧನೆ ಮಾಡಿದ್ದಾರೆ.
ಇನ್ನೂ ಆನ್‌ಲೈನ್‌ನಲ್ಲಿ ಸೋನಿಕಾ ಯಾದವ್ ಅವರ ಆರೋಗ್ಯದ ಬಗ್ಗೆಯೂ ಕಾಳಜಿಯನ್ನು ಹೊರಹಾಕಿದ್ದಾರೆ.
ಗರ್ಭಾವಸ್ಥೆಯ ಸಂದರ್ಭದಲ್ಲಿ ಮಹಿಳೆಯರು ತೂಕವನ್ನು ಮಾಡಬಹುದೇ ಎಂದು ಅನೇಕ ಜನರು ಆನ್‌ಲೈನ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ.
ಚಾಂಪಿಯನ್‌ಶಿಪ್‌ನಲ್ಲಿ ಮೋನಿಕಾ ಅವರು ಸ್ಕ್ವಾಟ್‌ಗಳಲ್ಲಿ 125 ಕೆಜಿ, ಬೆಂಚ್ ಪ್ರೆಸ್‌ನಲ್ಲಿ 80 ಕೆಜಿ ಮತ್ತು ಡೆಡ್‌ಲಿಫ್ಟ್‌ನಲ್ಲಿ 145 ಕೆಜಿ ಎತ್ತಿದರು. ಇನ್ಣೂ ಈ ಸಂಬಂಧ ಪ್ರತಿಕ್ರಿಯಿಸಿದ ಅವರು ಗರ್ಭಾವಸ್ಥೆ ಸಂದರ್ಭದಲ್ಲಿ ತೂಕ ಎತ್ತಿದ ಲೂಸಿ ಮಾರ್ಟಿನ್ಸ್ ಅವರಿಂದ ಸ್ಫೂರ್ತಿಯನ್ನು ಕಂಡುಕೊಂಡಿದ್ದೇನೆ. ಇನ್ನೂ ವೈದ್ಯರ ಮಾರ್ಗದರ್ಶನದ ಮೇರೆಗೆ ಮಾಡಿದ್ದೇನೆ ಎಂದಿದ್ದಾರೆ.
ಮಹಿಳಾ ತಜ್ಞೆಯೊಬ್ಬರು ಈ ಬಗ್ಗೆ ಪ್ರತಿಕ್ರಿಯಿಸಿ, ಗರ್ಭಾವಸ್ಥೆ ರೋಗವಲ್ಲ. ಉತ್ತಮ ಆರೋಗ್ಯಕ್ಕಾಗಿ ದೈಹಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು. ಆದರೆ ಈ ರೀತಿಯ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಮುನ್ನಾ ವೈದ್ಯರ ಮಾರ್ಗದರ್ಶನ ತುಂಬಾನೇ ಮುಖ್ಯ.