ರೋಹ್ಟಗಿ: ಕೆಲಸಕ್ಕೆ ಲೇಟ್ ಆಗಿ ಬಂದ ಮಹಿಳಾ ಉದ್ಯೋಗಿಗಳನ್ನು ಮುಟ್ಟಾಗಿದ್ದು ನಿಜಾನಾ ಎಂದು ಪುರುಷ ಮೇಲ್ವಿಚಾರಕರು ಬಟ್ಟೆ ಬಿಚ್ಚಲು ಒತ್ತಾಯಿಸಿದ ಹೇಯ ಕೃತ್ಯ ಹರ್ಯಾಣದಲ್ಲಿ ನಡೆದಿದೆ.
									
			
			 
 			
 
 			
					
			        							
								
																	ಮಹರ್ಷಿ ದಯಾನಂದ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿ ಬಳಿ ಪುರುಷ ಮೇಲ್ವಿಚಾರಕ ಈ ರೀತಿ ಅನುಚಿತವಾಗಿ ವರ್ತಿಸಿದ್ದಾನೆ. ಅಕ್ಟೋಬರ್ 26 ರಂದು ವಿಶ್ವವಿದ್ಯಾಲಯಕ್ಕೆ ರಾಜ್ಯಪಾಲರು ಭೇಟಿ ನೀಡುವ ಕಾರ್ಯಕ್ರಮವಿತ್ತು. ಈ ವೇಳೆ ನಾಲ್ವರು ಮಹಿಳಾ ಸಿಬ್ಬಂದಿಗಳ ಜೊತೆ ಮೇಲ್ವಿಚಾರಕರು ಈ ರೀತಿ ವರ್ತಿಸಿದ್ದಾರೆ ಎಂದು ಬೆಳಕಿಗೆ ಬಂದಿದೆ.
									
										
								
																	ನೈರ್ಮಲ್ಯ ಕೆಲಸ ಮಾಡುತ್ತಿದ್ದ ನಾಲ್ವರು ಮಹಿಳಾ ಸಿಬ್ಬಂದಿಗಳು ಕೆಲಸಕ್ಕೆ ಕೊಂಚ ತಡವಾಗಿ ಬಂದಿದ್ದರು. ಇದನ್ನು ಪ್ರಶ್ನಿಸಿದಾಗ ಮಹಿಳೆಯರು ಮುಟ್ಟಾಗಿದೆ, ಹೀಗಾಗಿ ಹೊಟ್ಟೆನೋವಿತ್ತು. ಅದಕ್ಕೇ ತಡವಾಗಿದೆ ಎಂದಿದ್ದರು.
									
											
							                     
							
							
			        							
								
																	ಇದಕ್ಕೇ ಮೇಲ್ವಿಚಾರಕರಾದ ವಿನೋದ್ ಕುಮಾರ್ ಮತ್ತು ವಿತೇಂದ್ರ ಕುಮಾರ್ ಎಂಬವರು ಮುಟ್ಟಾಗಿದ್ದು ನಿಜಾನಾ ಅಥವಾ ನೆಪ ಹೇಳುತ್ತಿದ್ದೀರಾ ಎಂದು ಪುರಾವೆ ಕೇಳಿದ್ದಾರೆ. ಪುರಾವೆಗಾಗಿ ಬಟ್ಟೆ ಬಿಚ್ಚಿ ಸ್ಯಾನಿಟರಿ ಪ್ಯಾಡ್ ಗಳನ್ನು ಧರಿಸಿದ್ದಾರೆಯೇ ಎಂದು ಪರಿಶೀಲಿಸಲು ಆದೇಶಿಸಿದ್ದಾರೆ. ಇದರ ವಿರುದ್ಧ ಕಾರ್ಮಿಕರು ಒಗ್ಗಟ್ಟಾಗಿ ಪ್ರತಿಭಟನೆ ನಡೆಸಿದ್ದಾರೆ. ಬಳಿಕ ಪುರುಷ ಮೇಲ್ವಿಚಾರಕರನ್ನು ಅಮಾನತುಗೊಳಿಸಲಾಗಿದ್ದು, ಪೊಲೀಸರಿಗೂ ದೂರು ನೀಡಲಾಗಿದೆ.