ಸೋನಿಪತ್: ಹರಿಯಾಣದ ಸೋನಿಪತ್‌ನಲ್ಲಿ ಯುವ ಮಾಡೆಲ್‌ನ ದೇಹವನ್ನು ಗಂಟಲು ಸೀಳಿಹತ್ಯೆ ಮಾಡಿ, ನಂತರ ಕಾಲುವೆಗೆ ಎಸೆದು ಹೋಗಿರುವ ಘಟನೆ ಸೋಮವಾರ ವರದಿಯಾಗಿದೆ.
ಹತ್ಯೆಯಾದವಳನ್ನು ಶೀತಲ್ ಹರ್ಯಾನ್ವಿ ಎಂದು ಗುರುತಿಸಲಾಗಿದೆ. ಸಂಗೀತ ಕ್ಷೇತ್ರದಲ್ಲಿ ಆಕೆ ಗುರುತಿಸಿಕೊಂಡಿದ್ದಳು.
ಶೀತಲ್ ತನ್ನ ಸಹೋದರಿ ನೇಹಾ ಜೊತೆ ಪಾಣಿಪತ್‌ನಲ್ಲಿ ವಾಸಿಸುತ್ತಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೂನ್ 14 ರಂದು ಶೀತಲ್ ಅಹರ್ ಗ್ರಾಮದಲ್ಲಿ ಚಿತ್ರೀಕರಣಕ್ಕೆ ತೆರಳಿದ್ದರು. ಸಂತ್ರಸ್ತೆಯ ಸಹೋದರಿ ನೀಡಿದ ದೂರಿನ ಪ್ರಕಾರ, ಶೀತಲ್ ತನ್ನ ಮಾಜಿ ಗೆಳೆಯ ಸುನೀಲ್ ತನ್ನನ್ನು ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾನೆ ಮತ್ತು ಬಲವಂತವಾಗಿ ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದಾನೆ ಎಂದು ಹೇಳಿದ್ದಳು.
ಹೀಗೇ ಹೇಳಿದ್ಮೇಲೆ ಸ್ವಲ್ಪ ಸಮಯದ ನಂತರ ಆಕೆಯನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಈ ಸಂಬಂಧ ಓಲ್ಡ್ ಇಂಡಸ್ಟ್ರಿಯಲ್ ಪೊಲೀಸ್ ಠಾಣೆಯಲ್ಲಿ ಕಾಣೆಯಾದವರ ದೂರನ್ನು ದಾಖಲಿಸಿದರು.
ತನಿಖೆಯ ನಂತರ, ಪೊಲೀಸರು ಖಾಂಡಾ ಗ್ರಾಮದ ಬಳಿಯ ಕಾಲುವೆಯಲ್ಲಿ ಆಕೆಯ ಶವವನ್ನು ಪತ್ತೆ ಮಾಡಿದ್ದಾರೆ.
ಆರು ತಿಂಗಳ ಹಿಂದೆ ಕರ್ನಾಲ್‌ನ ಮಾಡೆಲ್ ಟೌನ್‌ನಲ್ಲಿರುವ ಸುಕುನ್ ಎಂಬ ತನ್ನ ಹೋಟೆಲ್‌ನಲ್ಲಿ ತಂಗಿದ್ದ ಶೀತಲ್‌ನೊಂದಿಗೆ ಸುನೀಲ್ ಸ್ನೇಹ ಬೆಳೆಸಿದ ಎಂದು ಸಂತ್ರಸ್ತೆಯ ಸಹೋದರಿ ಪೊಲೀಸರಿಗೆ ತಿಳಿಸಿದ್ದಾರೆ.
ಇಬ್ಬರೂ ಹತ್ತಿರವಾದರು ಮತ್ತು ಕೆಲವೇ ತಿಂಗಳುಗಳಲ್ಲಿ ಸುನೀಲ್ ಸಂತ್ರಸ್ತೆಯನ್ನು ಮದುವೆಯಾಗುವಂತೆ ಕೇಳಿಕೊಂಡನು. ಆದರೆ, ಆತನಿಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ.