ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಹುತೇಕ ಕಂಪನಿಗಳು ತಮ್ಮ ನೌಕರರಿಗೆ ಬೋನಸ್ ಎಂದು ಒಂದಿಷ್ಟು ಹಣ ಕೊಡುತ್ತದೆ. ಆದರೆ ಇಲ್ಲೊಂದು ಕಂಪನಿ ಹಣದ ಬದಲು ಸೋನ್ ಪಾಪ್ಡಿ ಕೊಟ್ಟು ಕೈತೊಳೆದುಕೊಂಡಿದ್ದಕ್ಕೆ ನೌಕರರು ಮಾಡಿದ್ದೇನು ಗೊತ್ತಾ? ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಹರ್ಯಾಣದ ಸೋನಿಪಪ್ ನ ಗನ್ನೌರ್ ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಯೊಂದರಲ್ಲಿ ಘಟನೆ ನಡೆದಿದೆ. ದೀಪಾವಳಿ ಹಬ್ಬಕ್ಕೆ ಮಾಲಿಕರು ಏನು ಗಿಫ್ಟ್ ಕೊಡಬಹುದು ಎಂದು ನೌಕರರಿಗೆ ಕುತೂಹಲವಿತ್ತು. ಆದರೆ ಬೋನಸ್ ನ ನಿರೀಕ್ಷೆಯಲ್ಲಿದ್ದ ನೌಕರರಿಗೆ ಮಾಲಿಕರು ಕೊಟ್ಟಿದ್ದು ಒಂದೊಂದು ಸೋನ್ ಪಾಪ್ಡಿ ಪ್ಯಾಕೆಟ್.
ಇದು ನೌಕರರನ್ನು ಹತಾಶೆಗೊಳಪಡಿಸಿದೆ. ಮಾಲಿಕರ ವಿರುದ್ಧ ರೊಚ್ಚಿಗೆದ್ದ ನೌಕರರು ಸೋನಿಪತ್ ನ ಖಾಸಗಿ ಕಾರ್ಖಾನೆಯ ಮುಂದೆ ತಮಗೆ ಸಿಕ್ಕ ಸೋನ್ ಪಾಪ್ಡಿ ಸ್ವೀಟ್ ಪ್ಯಾಕೆಟ್ ನ್ನು ಎಸೆದು ಹೋಗಿದ್ದಾರೆ.
ಒಬ್ಬೊಬ್ಬರೇ ಮನೆಗೆ ತೆರಳುವಾಗ ಕಾರ್ಖಾನೆಯ ಗೇಟ್ ಮುಂದೆ ಸೋನ್ ಪಾಪ್ಡಿ ಪ್ಯಾಕೆಟ್ ಗಳನ್ನು ಎಸೆದು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಕೆಲವರು ಹೊರಗೆ ನಿಂತು ಗೇಟ್ ಒಳಗೆಯೂ ಎಸೆದಿದ್ದಾರೆ. ಈ ವಿಡಿಯೋ ಇಲ್ಲಿದೆ ನೋಡಿ.