Select Your Language

Notifications

webdunia
webdunia
webdunia
webdunia

ದೀಪಾವಳಿ 2025 ಗೋ ಪೂಜೆ ಮುಹೂರ್ತ ಯಾವಾಗ

Cow pooja

Krishnaveni K

ಬೆಂಗಳೂರು , ಸೋಮವಾರ, 13 ಅಕ್ಟೋಬರ್ 2025 (08:32 IST)
ದೀಪಾವಳಿ ಹಬ್ಬದ ಒಂದು ಪ್ರಮುಖ ಭಾಗಗಳಲ್ಲಿ ಗೋ ಪೂಜೆಯೂ ಒಂದು. ಲಕ್ಷ್ಮೀ ದೇವಿಯ ಪೂಜೆ ಜೊತೆಗೆ ಗೋ ಪೂಜೆಯನ್ನು ಬಹುತೇಕರು ಮಾಡುತ್ತಾರೆ. ಗೋ ಪೂಜೆ ಮಾಡಲು ಶುಭ ಮುಹೂರ್ತ ಯಾವಾಗ ತಿಳಿಯಿರಿ.

ಈ ಬಾರಿ ಅಕ್ಟೋಬರ್ 20 ಮತ್ತು 22 ರವರೆಗೆ ದೀಪಾವಳಿ ಹಬ್ಬ ಆಚರಿಸಲಾಗುತ್ತದೆ. ಮೊದಲ ದಿನ ಲಕ್ಷ್ಮೀ ಪೂಜೆಗೆ ಮೀಸಲು. ಮರುದಿನವೂ ಲಕ್ಷ್ಮೀ ಪೂಜೆಯನ್ನು ಮಾಡಲಾಗುತ್ತದೆ. ಅದರ ಜೊತೆಗೆ ಗೋ ಪೂಜೆ ಮಾಡಿದರೆ ಶ್ರೇಯಸ್ಕರವಾಗಿದೆ.

ಅಂದರೆ ಅಕ್ಟೋಬರ್ 22 ರಂದು ಗೋ ಪೂಜೆ ಮಾಡುವ ದಿನವಾಗಿದೆ. ಬಲಿಪಾಡ್ಯಮಿ ದಿನ ಅಂದರೆ ದೀಪಾವಳಿಯ ಕೊನೆಯ ದಿನ ಗೋ ಪೂಜೆ ಮಾಡಲಾಗುತ್ತದೆ. ಗೋ ಪೂಜೆಯನ್ನು ಗೋಧೂಳಿ ಲಗ್ನದಲ್ಲಿ ಮಾಡುವುದು ಶುಭಕರವಾಗಿದೆ.

ಹೀಗಾಗಿ ಬಲಿಪಾಡ್ಯಮಿ ದಿನ ಸಂಜೆ 5.30 ರಿಂದ 6.30 ರೊಳಗಾಗಿ ಗೋ ಪೂಜೆ ಮಾಡುವ ಶುಭ ಮುಹೂರ್ತವಾಗಿದೆ. ಈ ಸಂದರ್ಭದಲ್ಲಿ ಗೋವುಗಳನ್ನು ಸ್ನಾನ ಮಾಡಿಸಿ ಹಣೆಗೆ ತಿಲಕವಿಟ್ಟು, ಕೊರಳಿಗೆ ಹೂ ಮಾಲೆಯನ್ನು ಹಾಕಿ ಆರತಿ ಬೆಳೆಗಿದ ಬಳಿಕ ಗೋ ಗ್ರಾಸ ನೀಡುವ ಮೂಲಕ ಸಿಂಪಲ್ ಆಗಿ ಪೂಜೆ ಮಾಡಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಭೈರವನ ಅನುಗ್ರಹಕ್ಕಾಗಿ ಭೈರವ ಚಾಲೀಸಾ ಓದಿ