ದೀಪಾವಳಿ ಎಂದರೆ ಲಕ್ಷ್ಮೀ ದೇವಿಯು ಮನೆ ಮನೆಗೆ ಬರುವ ದಿನಗಳು. ಈ ದಿನ ಮನೆಯನ್ನು ಒಪ್ಪ ಓರಣವಾಗಿಟ್ಟುಕೊಳ್ಳುವುದು ಮುಖ್ಯ. ಆದರೆ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ತಂದರೆ ಲಕ್ಷ್ಮೀ ದೇವಿ ಮನೆಗೆ ಬರಲಾರಳು.
ದೀಪಾವಳಿ ಸಂದರ್ಭದಲ್ಲಿ ಮನೆಗೆ ಹೊಸ ವಸ್ತು ಖರೀದಿಸಿ ತರುವ ಅಭ್ಯಾಸ ಅನೇಕರಿಗಿರುತ್ತದೆ. ಆದರೆ ಎಂಥಾ ವಸ್ತುಗಳನ್ನು ಖರೀದಿಸಿ ಮನೆಗೆ ತರಬೇಕು ಎಂಬುದರ ಅರಿವಿರಬೇಕು. ಇಲ್ಲದೇ ಹೋದರೆ ಮನೆಯಲ್ಲಿ ದಾರಿದ್ರ್ಯ ಬರುವುದು ಖಂಡಿತಾ.
ವಿಶೇಷವಾಗಿ ದೀಪಾವಳಿ ಸಂದರ್ಭದಲ್ಲಿ ಉಪ್ಪಿನಕಾರಿ, ನಿಂಬೆಹುಳ್ಳಿ, ಕಪ್ಪು ಬಟ್ಟೆ, ಹುಳಿ ಪದಾರ್ಥಗಳನ್ನು ತರಬಾರದು. ಇದರಿಂದ ಮನೆಯಲ್ಲಿ ನೆಮ್ಮದಿ ಕೊರತೆಯಾಗುತ್ತದೆ. ಕಪ್ಪು ವಸ್ತುಗಳು ದುಃಖದ ಸಂಕೇತ. ದೀಪಾವಳಿ ಸಂದರ್ಭದಲ್ಲಿ ಮನೆಯಲ್ಲಿ ಸಂಭ್ರಮವಿರಬೇಕೇ ಹೊರತು ದುಃಖವಿರಬಾರದು.
ಅದೇ ರೀತಿ ಹಬ್ಬದ ದಿನ ಕಪ್ಪು ಬಟ್ಟೆ ಧರಿಸುವುದೂ ನಿಷಿದ್ಧವಾಗಿದೆ. ಇದರಿಂದ ಲಕ್ಷ್ಮೀ ದೇವಿಯು ಕೋಪಗೊಳ್ಳುತ್ತಾಳೆ ಮತ್ತು ಹಣಕಾಸಿನ ಸಮಸ್ಯೆಗಳು ಬರಬಹುದು ಎಂಬ ಮಾತಿದೆ. ಹೀಗಾಗಿ ಈ ವಿಚಾರಗಳನ್ನು ನೆನಪಿನಲ್ಲಿಟ್ಟುಕೊಳ್ಳಿ.