Select Your Language

Notifications

webdunia
webdunia
webdunia
webdunia

ದೀಪಾವಳಿಗೆ ಗೋ ಪೂಜೆ ಮಾಡುವಾಗ ಈ ಶಕ್ತಿಶಾಲೀ ಮಂತ್ರ ಪಠಿಸಿ

Cow pooja

Krishnaveni K

ಬೆಂಗಳೂರು , ಗುರುವಾರ, 9 ಅಕ್ಟೋಬರ್ 2025 (08:40 IST)
Photo Credit: AI Image
ದೀಪಾವಳಿ ಸಂದರ್ಭದಲ್ಲಿ ಲಕ್ಷ್ಮೀ ದೇವಿಯ ಪೂಜೆ ಜೊತೆಗೆ ಗೋ ಪೂಜೆಯನ್ನೂ ಮಾಡಲಾಗುತ್ತದೆ. ಮಹಾವಿಷ್ಣುವಿಗೆ ಪ್ರಿಯನಾದ, ಮುಕ್ಕೋಟಿ ದೇವರ ಆವಾಸಸ್ಥಾನವಾದ ಗೋವಿಗೆ ಪೂಜೆ ಮಾಡುವುದು ಅತ್ಯಂತ ಶ್ರೇಯಸ್ಕರವಾಗಿದೆ. ಗೋ ಪೂಜೆ ಮಾಡುವಾಗ ಈ ಶಕ್ತಿ ಶಾಲೀ ಮಂತ್ರವನ್ನು ತಪ್ಪದೇ ಪಠಿಸಬೇಕು.

ಹಿಂದೂ ಧರ್ಮದಲ್ಲಿ ಗೋವಿಗೆ ಎಂಥಾ ಸ್ಥಾನವಿದೆ ಎಂದರೆ ಅದನ್ನು ಅತ್ಯಂತ ಪೂಜನೀಯ ದೃಷ್ಟಿಯಿಂದ ನೋಡಲಾಗುತ್ತದೆ. ಗೋವುಗಳನ್ನು ಪೂಜೆ ಮಾಡುವುದರಿಂದ ಸಕಲ ಪಾಪ ಪರಿಹಾರವಾಗುತ್ತದೆ. ಜೀವನ ಸಂಕಷ್ಟಗಳು ದೂರವಾಗುತ್ತದೆ. ಗೋವುಗಳಿಗೆ ಮೇವು ಅಥವಾ ಆಹಾರ ನೀಡುವುದರಿಂದ ಅದು ಆಹಾರ ನೀಡಿದವರನ್ನು ಮನಸಾರೆ ಹರಸುತ್ತದಂತೆ.

ಈ ಕಾರಣಕ್ಕೆ ಗೋ ಪೂಜೆ ಮಾಡುವಾಗ ಅವುಗಳಿಗೆ ತಪ್ಪದೇ ಗ್ರಾಸ ನೀಡಲಾಗುತ್ತದೆ. ಹುಲ್ಲು, ಹಣ್ಣು, ಅನ್ನ ಹೀಗೆ ಗೋ ಗ್ರಾಸವಾಗಿ ಏನನ್ನೇ ನೀಡಿದರೂ ಹಸು ಅದನ್ನು ಅತ್ಯಂತ ಪ್ರೀತಿಯಿಂದ ಸ್ವೀಕರಿಸಿ ನಮ್ಮನ್ನು ಆಶೀರ್ವದಿಸುತ್ತದೆ.

ವಿಶೇಷವಾಗಿ ಗೋ ಪೂಜೆ ಮಾಡುವಾಗ ಈ ಮಂತ್ರವನ್ನು ಪಠಿಸಬೇಕು.

ಲಕ್ಷ್ಮೀರ್ಯ ಲೋಕಪಾಲಾನಾಂ ಧೇನುರೂಪೇಣ ಸಂಸ್ಥಿತಾ
ಘೃತಂ ವಹತಿ ಯರ್ಘಾರ್ತೇ ಮಮ ಪಾಪಂ ವ್ಯಪೋಹತು

ಈ ಮಂತ್ರವನ್ನು ಹೇಳಿ ಗೋ ಪೂಜೆ ಮಾಡುವುದರಿಂದ ಸಕಲ ಪಾಪಗಳು ಪರಿಹಾರವಾಗುತ್ತದೆ ಎಂಬ ನಂಬಿಕೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗುರುವಾರ ಪಠಿಸಬೇಕಾದ ರಾಘವೇಂದ್ರ ಸ್ತೋತ್ರ