Select Your Language

Notifications

webdunia
webdunia
webdunia
webdunia

ಗಣೇಶ ಹಬ್ಬದ ಪೂಜಾ ಮುಹೂರ್ತ ಯಾವಾಗ ಇಲ್ಲಿದೆ ವಿವರ

Ganesha Lord

Krishnaveni K

ಬೆಂಗಳೂರು , ಮಂಗಳವಾರ, 19 ಆಗಸ್ಟ್ 2025 (09:58 IST)
ಇನ್ನೇನು ಈ ವರ್ಷದ ಗಣೇಶ ಹಬ್ಬ ಬಂದೇ ಬಿಟ್ಟಿತು. ಆಗಸ್ಟ್ 27 ರಂದು ಈ ಬಾರಿ ಗಣೇಶ ಹಬ್ಬವಿದೆ. ಗಣೇಶ ಹಬ್ಬದ ಪೂಜಾ ಶುಭ ಮುಹೂರ್ತ ಎಷ್ಟು ಗಂಟೆಗೆ ಇಲ್ಲಿದೆ ವಿವರ.

ಪ್ರತೀ ಬಾರಿಯಂತೆ ಈ ಬಾರಿಯೂ ಭರ್ಜರಿಯಾಗಿ ಗಣೇಶ ಹಬ್ಬ ಆಚರಿಸಲು ಎಲ್ಲೆಡೆ ಸಿದ್ಧತೆ ಆರಂಭವಾಗಿದೆ. ಬೆಂಗಳೂರಿನಲ್ಲಂತೂ ರಸ್ತೆಯ ಪಕ್ಕದಲ್ಲೆಲ್ಲಾ ಗಣಪನ ಮೂರ್ತಿ ಈಗಾಗಲೇ ಸಾಕಷ್ಟು ಸಂಖ್ಯೆಯಲ್ಲಿ ಕಂಡುಬರುತ್ತಿದೆ.

ಅನೇಕರು ಗಣೇಶನ ಮೂರ್ತಿಯನ್ನು ಮನೆಗೆ ಭಕ್ತಿಯಿಂದ ಕರೆತಂದು ಕೂರಿಸಿ ಪೂಜೆ ಮಾಡುತ್ತಾರೆ. ಹೀಗೆ ಪೂಜೆ ಮಾಡಲು ಶುಭ ಮುಹೂರ್ತ ಯಾವಾಗ ಎಂದು ತಿಳಿದುಕೊಳ್ಳುವುದು ಮುಖ್ಯ.

ಈ ಬಾರಿ ಚತುರ್ಥಿ ತಿಥಿ ಆಗಸ್ಟ್ 26 ರ ಅಪರಾಹ್ನ 1.56 ರಿಂದ ಆರಂಭವಾಗಿ ಮರುದಿನ ಅಂದರೆ ಆಗಸ್ಟ್ 27 ರ 3.44 ಕ್ಕೆ ಕೊನೆಯಾಗುತ್ತದೆ. ಅದರಲ್ಲೂ ಆಗಸ್ಟ್ 27 ರಂದು ಮಧ್ಯಾಹ್ನ 11.05 ರಿಂದ 1.40 ರವರೆಗೆ ಗಣೇಶನಿಗೆ ಪೂಜೆ ಮಾಡಲು ಶುಭ ಸಮಯವಾಗಿದೆ. ಆಗಸ್ಟ್ 26 ರಂದು ಮಧ್ಯಾಹ್ನ 1.54 ರಿಂದ ರಾತ್ರಿ 8.29 ರವರೆಗೆ ಚಂದ್ರ ದರ್ಶನ ಮಾಡುವುದು ಬೇಡ. ಪೂಜೆ ಮಾಡುವಾಗ ತಪ್ಪದೇ ಓಂ ಗಂ ಗಣಪತಯೇ ನಮಃ ಮಂತ್ರವನ್ನು ಹೇಳುತ್ತಾ ಪೂಜೆ ಮಾಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಂಗಳವಾರ ತಪ್ಪದೇ ಈ ಹನುಮಾನ್ ಸ್ತೋತ್ರ ಪಠಿಸಿ