ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿಯಿದ್ದು ಲಕ್ಷ್ಮೀ ಪೂಜೆ ಮಾಡಲು ಶುಭ ಸಮಯ ಮತ್ತು ಮುಹೂರ್ತ ಯಾವುದು ಇಲ್ಲಿದೆ ವಿವರ.
ಈ ಬಾರಿ ಅಕ್ಟೋಬರ್ 20 ಮತ್ತು 21 ರಂದು ದೀಪಾವಳಿ ಹಬ್ಬವಿರಲಿದೆ. ಅಕ್ಟೋಬರ್ 20 ಸೋಮವಾರ ಅಪರಾಹ್ನ 3.44 ಕ್ಕೆ ಅಮವಾಸ್ಯೆ ಆರಂಭವಾಗುತ್ತದೆ. ಮರುದಿನ ಅಂದರೆ ಅಕ್ಟೋಬರ್ 21 ರಂದು ಮಂಗಳವಾರ ಸಂಜೆ 5.54 ಕ್ಕೆ ಅಮವಾಸ್ಯೆ ಮುಕ್ತಾಯವಾಗುತ್ತದೆ.
ಎರಡೂ ದಿನ ಲಕ್ಷ್ಮೀ ಪೂಜೆಯನ್ನು ಭಕ್ತಿಯಿಂದ ಮಾಡುವುದರಿಂದ ಸೌಭಾಗ್ಯ ದೇವತೆ ನಿಮಗೆ ಒಲಿಯುತ್ತಾಳೆ. ಆದರೆ ಅದಕ್ಕೂ ವಿಶೇಷ ಮುಹೂರ್ತವಿದೆ. ಸೋಮವಾರದಂದು ಸಂಜೆ 7.25 ರಿಂದ ರಾತ್ರಿ 9.20 ರವರೆಗಿನ ವೃಷಭ ಲಗ್ನ ಮುಹೂರ್ತದಲ್ಲಿ ಲಕ್ಷ್ಮೀ ಪೂಜೆಯನ್ನು ಮಾಡಬಹುದಾಗಿದೆ.
ಮಂಗಳವಾರ ಬೆಳಿಗ್ಗೆ 8.30 ರಿಂದ 10.20 ರವರೆಗೆ ವೃಶ್ಚಿಕ ಲಗ್ನದಲ್ಲಿ ಮತ್ತು ಅಪರಾಹ್ನ 2.40 ರಿಂದ ಸಂಜೆ 4.05 ರವರೆಗೆ ಲಕ್ಷ್ಮೀ ಪೂಜೆಯನ್ನು ಮಾಡಲು ಪ್ರಶಸ್ತವಾದ ಮುಹೂರ್ತವಾಗಿದೆ. ಸೋಮವಾರ ಧನಲಕ್ಷ್ಮೀ ಪೂಜೆಗೆ ಹೇಳಿ ಮಾಡಿಸಿದ ದಿನವಾಗಿದೆ.