ನವದೆಹಲಿ: ಮತಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ವೇದಿಕೆಯಲ್ಲಿ ಡ್ಯಾನ್ಸ್ ಮಾಡಕ್ಕೂ ಸಿದ್ದ ಎಂದು ವ್ಯಂಗ್ಯವಾಡಿದ್ದ ಲೋಕಸಭಾ ವಿಪಕ್ಷ ನಾಯಕ ರಾಹುಲ್ ವಿರುದ್ಧ  ಬಿಜೆಪಿ ಗುರುವಾರ ಬಿಹಾರ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಅವರಿಗೆ ದೂರು ನೀಡಿದೆ. 
 
									
			
			 
 			
 
 			
					
			        							
								
																	29 ಅಕ್ಟೋಬರ್ 2025 ರಂದು ಬಿಹಾರದ ಮುಜಾಫರ್‌ಪುರ ಮತ್ತು ದರ್ಭಾಂಗದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿ  ನರೇಂದ್ರ ಮೋದಿಯವರ ವಿರುದ್ಧ ಅತ್ಯಂತ ಅವಹೇಳನಕಾರಿ, ಅಸಭ್ಯ ಮತ್ತು ವೈಯಕ್ತಿಕ ಟೀಕೆಗಳನ್ನು ಮಾಡಿದ್ದಾರೆ. 
									
										
								
																	ಕಾಂಗ್ರೆಸ್ ಸಂಸದರ ಹೇಳಿಕೆಯು ಪ್ರಧಾನ ಮಂತ್ರಿ ಕಚೇರಿಗೆ ಆಳವಾದ ಅಗೌರವ ಮಾತ್ರವಲ್ಲ, ಆದರೆ ಅದು "ಸಭ್ಯತೆ ಮತ್ತು ಪ್ರಜಾಸತ್ತಾತ್ಮಕ ಭಾಷಣದ ಎಲ್ಲಾ ಗಡಿಗಳನ್ನು ದಾಡಿದೆ ಎಂದು ಹೇಳಿದೆ. 
									
											
							                     
							
							
			        							
								
																	ಮಾದರಿ ನೀತಿ ಸಂಹಿತೆ ಉಲ್ಲಂಘನೆ, ಪ್ರಜಾಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 123(4)ರ ಅಡಿಯಲ್ಲಿ ಭ್ರಷ್ಟ ಕೃತ್ಯಗಳನ್ನು ಎಸಗಿರುವ ರಾಹುಲ್ ಗಾಂಧಿ ವಿರುದ್ಧ ಚುನಾವಣಾ ಆಯೋಗವು ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಒತ್ತಾಯಿಸಿದೆ.