ಬಿಹಾರ: 1971ರ ಬಾಂಗ್ಲಾ ವಿಮೋಚನಾ ಯುದ್ಧವನ್ನು ಉಲ್ಲೇಖಿಸಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಗೆ ಹೋಲಿಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎದುರು ನಿಲ್ಲುವ ದೃಷ್ಟಿಯಾಗಲೀ, ಸಾಮರ್ಥ್ಯವಾಗಲೀ ಇಲ್ಲ ಮೋದಿ ಅವರಿಗಿಲ್ಲ. 1971ರ ಬಾಂಗ್ಲಾದೇಶದ ಯುದ್ಧದ ಸಂದರ್ಭದಲ್ಲಿ ಅಮೆರಿಕ ತನ್ನ ವಿಮಾನ ಹಾಗೂ ನೌಕಾಪಡೆಯನ್ನು ಕಳುಹಿಸಿ ಭಾರತವನ್ನು ಬೆದರಿಸಲು, ಬೆದರಿಕೆ ಹಾಕಿತ್ತು. ಪ್ರಧಾನಿಯಾಗಿದ್ದ ಇಂದಿರಾಗಾಂಧಿ, ನಿಮ್ಮ ನೌಕಾಪಡೆಗೆ ನಾವು ಹೆದರುವುದಿಲ್ಲ, ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಖಡಕ್ ಆಗಿ ಸಂದೇಶ ಕಳುಹಿಸಿದ್ದರು.
ಪ್ರಧಾನಿ ನರೇಂದ್ರ ಮೋದಿಗೆ ಅಮೆರಿಕದ ಅಧ್ಯಕ್ಷರ ಎದುರು ನಿಲ್ಲುವ ವಿಚಾರವಾಗಿ ಸವಾಲೆಸೆಯುತ್ತೇನೆ.
ನರೇಂದ್ರ ಮೋದಿ ಅವರಿಗೆ ಧೈರ್ಯವಿದ್ದರೆ ಬಿಹಾರದಲ್ಲಿ ನಡೆಯುವ ಯಾವುದೇ ಸಭೆಯಲ್ಲಿ ಅವರು ಅಮೆರಿಕದ ಅಧ್ಯಕ್ಷರು ಸುಳ್ಳು ಹೇಳುತ್ತಿದ್ದಾರೆ ಮತ್ತು ಅವರು (ಪ್ರಧಾನಿ ಮೋದಿ) ಅವರಿಗೆ ತಲೆಬಾಗಲಿಲ್ಲ ಎಂದು ಹೇಳಲಿ ಎಂದು ಸಾವಲೆಸೆದರು.