ಬಿಹಾರ: ಮತಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನೃತ್ಯ ಮಾಡಲು ಸಿದ್ಧ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕಿಡಿಕಾರಿದರು.
 
									
			
			 
 			
 
 			
					
			        							
								
																	ಬಿಹಾರದಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. 
									
										
								
																	ಮುಜಾಫರ್‌ಪುರದಲ್ಲಿ ಮಹಾಘಟಬಂಧನ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಮತಕ್ಕಾಗಿ ನೃತ್ಯ ಮಾಡಲು ಸಿದ್ದ. 
									
											
							                     
							
							
			        							
								
																	ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಮುಖಂಡರು  "ಮೋದಿ ಅವರು ಮತಕ್ಕಾಗಿ ನಾಟಕ ಮಾಡಲು ಹೇಳಿದರೆ ಅವರು ಮಾಡುತ್ತಾರೆ, ನೀವು ಅವರಿಗೆ ಮತ ಹಾಕುತ್ತೀರಿ ಎಂದರೆ ವೇದಿಕೆ ಮೇಲೆ ನೃತ್ಯ ಮಾಡಲು ರೆಡಿ ಎಂದು ಅವರು ಹೇಳಿದರು. 
									
			                     
							
							
			        							
								
																	ರಾಜ್ಯದಲ್ಲಿ ಎನ್‌ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯ ಸರ್ಕಾರದಲ್ಲಿ ಕೇವಲ ಮುಖ, ಆದರೆ ರಿಮೋಟ್ ಕಂಟ್ರೋಲ್ ಬಿಜೆಪಿ ಕೈಯಲ್ಲಿದೆ.