Select Your Language

Notifications

webdunia
webdunia
webdunia
webdunia

ಮತ್ತೊಮ್ಮೆ ಆರ್‌ಎಸ್‌ಎಸ್ ನಿಷೇಧಿಸುವಂತೆ ಕರೆ ನೀಡಿದ ಮಲ್ಲಿಕಾರ್ಜುನ ಖರ್ಗೆ

Congress President Mallikarjun Kharge

Sampriya

ನವದೆಹಲಿ , ಶುಕ್ರವಾರ, 31 ಅಕ್ಟೋಬರ್ 2025 (15:54 IST)
ನವದೆಹಲಿ: ಆರ್‌ಎಸ್‌ಎಸ್‌  ವಿರೋಧಿ ಹೇಳಿಕೆ ನೀಡಿ ಸುದ್ದಿಯಾಗಿದ್ದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇದೀಗ ಮತ್ತೇ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್) ನಿಷೇಧಿಸುವಂತೆ  ಕರೆ ನೀಡಿದ್ದಾರೆ. 

ಭಾರತದ ಪ್ರಸ್ತುತ ಕಾನೂನು ಮತ್ತು ಸುವ್ಯವಸ್ಥೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಆರ್‌ಎಸ್‌ಎಸ್ ಕಾರಣವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಅಭಿಪ್ರಾಯಗಳನ್ನು ನಿಜವಾಗಿಯೂ ಗೌರವಿಸಿದರೆ, ಆರ್‌ಎಸ್‌ಎಸ್ ಅನ್ನು ನಿಷೇಧಿಸುವ ನಿರ್ಧಾರವನ್ನು ಅವರು ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು. 

ದೇಶದಲ್ಲಿ ಆಗಿರುವ ತಪ್ಪುಗಳು ಮತ್ತು ಇಲ್ಲಿನ ಎಲ್ಲಾ ಕಾನೂನು ಸುವ್ಯವಸ್ಥೆ ಸಮಸ್ಯೆಗಳಿಗೆ ಬಿಜೆಪಿ ಮತ್ತು ಆರೆಸ್ಸೆಸ್ ಕಾರಣ ಎಂದು ಖರ್ಗೆ ಹೇಳಿದರು. 

ಭಾರತದ ಉಕ್ಕಿನ ಮಹಿಳೆ ಇಂದಿರಾಗಾಂಧಿ ಅವರೊಂದಿಗೆ ದೇಶದ ಏಕತೆ ಕಾಪಾಡಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದ್ದೇವೆ ಎಂದು ಖರ್ಗೆ ಹೇಳಿದರು. ಸರ್ದಾರ್ ಪಟೇಲ್ ಅವರು ಶ್ಯಾಮ ಪ್ರಸಾದ್ ಮುಖರ್ಜಿ ಅವರಿಗೆ ಬರೆದ ಪತ್ರವನ್ನು ನೆನಪಿಸಿಕೊಂಡ ಅವರು, ಗಾಂಧಿಯವರ ಮರಣದ ನಂತರ ಆರ್‌ಎಸ್‌ಎಸ್ ಹೇಗೆ ಸಂತೋಷಪಟ್ಟಿದೆಯೋ, ಅವುಗಳನ್ನು ನಿಷೇಧಿಸದೆ ಬೇರೆ ದಾರಿಯಿಲ್ಲ ಎಂದು ಹೇಳಿದರು. 

ಮಹಾತ್ಮ ಗಾಂಧಿಯವರ ಹತ್ಯೆಯ ನಂತರ ಆರ್‌ಎಸ್‌ಎಸ್ ಸಿಹಿ ಹಂಚಿದೆ ಎಂದು ಅವರು ಒತ್ತಿ ಹೇಳಿದರು. "ಗಾಂಧಿಯವರ ಸಾವಿನಿಂದ ಆರ್‌ಎಸ್‌ಎಸ್‌ನವರು ಸಂತೋಷಪಟ್ಟ ರೀತಿಯಲ್ಲಿ ನಂತರ ಅವರನ್ನು ನಿಷೇಧಿಸದೆ ಬೇರೆ ದಾರಿಯಿಲ್ಲ ಎಂದು ಪಟೇಲ್ ಪತ್ರ ಬರೆದಿದ್ದಾರೆ. ಅವರು ಶ್ಯಾಮ ಪ್ರಸಾದ್ ಮುಖರ್ಜಿ ಅವರಿಗೆ ಈ ಪತ್ರ ಬರೆದಿದ್ದಾರೆ...ಸಂಘದ ಜನರ ಭಾಷಣಗಳು ವಿಷಪೂರಿತವಾಗಿವೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ವಿಎಚ್‌ಪಿ ಮುಖಂಡ ಶರಣ್ ಪಂಪ್‌ವೆಲ್ ವಿರುದ್ಧ ದಾಖಲಾಯಿತು ಪ್ರಕರಣ