Select Your Language

Notifications

webdunia
webdunia
webdunia
webdunia

ವಿಎಚ್‌ಪಿ ಮುಖಂಡ ಶರಣ್ ಪಂಪ್‌ವೆಲ್ ವಿರುದ್ಧ ದಾಖಲಾಯಿತು ಪ್ರಕರಣ

VHP Leader Sharan Pumpwell

Sampriya

ಮಂಗಳೂರು , ಶುಕ್ರವಾರ, 31 ಅಕ್ಟೋಬರ್ 2025 (15:33 IST)
Photo Credit X
ಮಂಗಳೂರು: ವಿಎಚ್‌ಪಿ ಮುಖಂಡ ಶರಣ್  ಪಂಪ್‌ವೆಲ್ ವಿರುದ್ಧ ದಾಖಲಾದ ಪ್ರಕರಣ ಸಂಬಂಧ ಇದೀಗ  ಕದ್ರಿ ಪೊಲೀಸ್ ಠಾಣೆಗೆ ಕರೆಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಕಮೆಂಟ್ ಟ್ಯಾಗ್ ಮಾಡಿದ ಆರೋಪ ಸಂಬಂಧ ವಿಚಾರಣೆಗೆ ಕರೆತರಲಾಗಿದೆ.   

ಇದಿಘ ಹಿಂದೂ ಸಂಘೆನೆ ಕಾರ್ಯಕರ್ತರು ನೋಟಿಸ್‌ ಕೊಡದೆ, ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ  ಹೈ ಡ್ರಾಮಾ ನಡೆಸಿದರು.

ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಪ್ರತಿಕ್ರಿಯಿಸಿ, ವಿಕಾಸ್ ಎಂಬಾತ ಹಾಕಿದ್ದ ಕಮೆಂಟ್ ಅನ್ನು ಶರಣ್ ಪಂಪ್ ವೆಲ್ ಶೇರ್ ಮಾಡಿದ್ದರು. ಶರಣ್ ಪಂಪ್ ವೆಲ್ ಶೇರ್ ಮಾಡಿದ್ದ ವಿಡಿಯೋ ಈಗಾಗಲೇ ಡಿಲೀಟ್ ಆಗಿದೆ. ಈ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದರು.

ಘಟನೆ ವಿವರ ಇಲ್ಲಿದೆ: 

ಶರಣ್‌ ಪಂಪವೆಲ್‌ ಆರ್‌ಎಸ್‌ಎಸ್‌ ಮುಖಂಡರೊಬ್ಬರ ಭಾಷಣದ ತುಣುಕನ್ನು ಹಂಚಿಕೊಂಡಿದ್ದರು. ಆ ವಿಡಿಯೋದಲ್ಲಿ ಹೀಗಿತ್ತು.. ಕಳೆದ ಎರಡು ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 45,700 ಮಕ್ಕಳು ಹುಟ್ಟಿದ್ದಾರೆ. ಅದರಲ್ಲಿ 23,200 ಮಕ್ಕಳು ಹಿಂದೂಗಳು, 22,200 ಮಕ್ಕಳು ಅಲ್ಪಸಂಖ್ಯಾತರು. ನಮ್ಮ ಜಿಲ್ಲೆಯಲ್ಲಿ ಶೇ.78 ಜನಸಂಖ್ಯೆ ಹಿಂದೂಗಳದ್ದು. ಹುಟ್ಟಿದ ಮಕ್ಕಳು 23,000. ಆದರೆ ಕೇವಲ ಶೇ.28 ಇರುವ ಅಲ್ಪಸಂಖ್ಯಾತರಿಗೆ 22,000 ಮಕ್ಕಳು. ಹೀಗಾದರೆ ಇನ್ನು 15 ವರ್ಷಗಳಲ್ಲಿ ನಮ್ಮ ಊರು ಎಲ್ಲಿಗೆ ಹೋಗುತ್ತದೆ? ದೇಶ ಉಳಿಯುತ್ತಾ? ಸಮಾಜ ಉಳಿಯುತ್ತಾ? ನಾವು ಒಂದು ನಿಶ್ಚಯ ಮಾಡಬೇಕು. ಮುಸ್ಲಿಂರ ಜನಸಂಖ್ಯೆ ಜಿಹಾದ್ ಮೆಟ್ಟಿ ನಿಲ್ಲೋಣ ಎಂಬ ಎಂಬ ಪ್ರಚೋದನಕಾರಿ ವಾಕ್ಯದೊಂದಿಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಕಾಸ್‌ ಪುತ್ತೂರು ಶೇರ್ ಮಾಡಿದ್ದ ವಿಡಿಯೋವನ್ನು ಶರಣ್‌ ಪಂಪವೆಲ್‌ ರೀಶೇರ್‌ ಮಾಡಿದ್ದರು.

ಪ್ರಚೋದನಕಾರಿ ವಿಡಿಯೋ ಸಂಬಂಧ ಪೊಲೀಸರು, ಸ್ವಯಂಪ್ರೇರಿತವಾಗಿ (ಸುಮೊಟೊ) ಪ್ರಕರಣವನ್ನು ದಾಖಲಿಸಿಕೊಂಡಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ