ನವದೆಹಲಿ: ಏರ್ ಇಂಡಿಯಾದ ಗ್ರೌಂಡ್ ಹ್ಯಾಂಡ್ಲಿಂಗ್ ಸರ್ವಿಸ್ ಪ್ರೊವೈಡರ್ ಎಐಎಸ್‌ಎಟಿಎಸ್ ನಿರ್ವಹಿಸುತ್ತಿದ್ದ ಬಸ್‌ಗೆ ಮಂಗಳವಾರ ಮಧ್ಯಾಹ್ನ ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 3 ನಲ್ಲಿ ಬೆಂಕಿ ಹೊತ್ತಿಕೊಂಡು, ಆತಂಕ ಸೃಷ್ಟಿಯಾಗಿದೆ.
ಆದರೆ ಅದೃಷ್ಟವಶಾತ್ ಸಿಬ್ಬಂದಿಯಾಗಲಿ, ಪ್ರಯಾಣಿಕರಾಗಲಿ ಗಾಯಗೊಂಡಿಲ್ಲ ಎಂದು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಹೇಳಿಕೆ ತಿಳಿಸಿದೆ.
ಮಧ್ಯಾಹ್ನ 12:25 ರ ಸುಮಾರಿಗೆ ಸಿ-34 ಪಿಯರ್, ಟರ್ಮಿನಲ್-3 ಬಳಿ ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಕಾಣಿಸಿಕೊಂಡಾಗ, ಚಾಲಕ ಎಲ್ಲಾ ಪ್ರಯಾಣಿಕರನ್ನು ಸ್ಥಳಾಂತರಿಸಿದರು ಮತ್ತು ನಂತರ ವಾಹನದಲ್ಲಿದ್ದ ಅಗ್ನಿಶಾಮಕ ವ್ಯವಸ್ಥೆಯನ್ನು ಬಳಸಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು.
ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ರವಾನಿಸಲಾಗಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗಿದೆ.ಎಆರ್‌ಎಫ್‌ಎಫ್ ತಂಡ ಸ್ಪಂದಿಸಿದ್ದು, ಬೆಂಕಿಯನ್ನು ನಂದಿಸಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ. ಇಲ್ಲಿಯವರೆಗೆ ಯಾವುದೇ ವಿಮಾನ ಅಥವಾ ಇತರ ಸೌಲಭ್ಯಗಳಿಗೆ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಏತನ್ಮಧ್ಯೆ, CASO, CO Ops, ಮತ್ತು DC Ops ಸಹ ಸ್ಥಳಕ್ಕೆ ಪ್ರತಿಕ್ರಿಯಿಸಿದೆ ಎಂದು CISF ತಿಳಿಸಿದೆ.