ಪಾಟ್ನಾ: ಕೆಲವರು ಮುಳುಗುವುದು ಹೇಗೆ ಎಂದು ಪ್ರಾಕ್ಟೀಸ್ ಮಾಡ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಪ್ರಧಾನಿ ಮೋದಿ ಟಾಂಗ್ ಕೊಟ್ಟಿದ್ದಾರೆ.
ಬಿಹಾರ ಚುನಾವಣೆ ಪ್ರಚಾರದ ವೇಳೆ ರಾಹುಲ್ ಗಾಂಧಿ ಸ್ಥಳೀಯ ಮೀನುಗಾರರೊಂದಿಗೆ ಕೊಳಕ್ಕೆ ಹಾರಿದ್ದ ವಿಡಿಯೋ ವೈರಲ್ ಆಗಿತ್ತು. ಇದಕ್ಕೆ ಮೊದಲು ರಾಹುಲ್ ಗಾಂಧಿ, ಮೋದಿ ವೋಟ್ ಗಾಗಿ ನೀವು ಡ್ಯಾನ್ಸ್ ಮಾಡಿ ಎಂದರೂ ಮಾಡ್ತಾರೆ ಎಂದು ವ್ಯಂಗ್ಯ ಮಾಡಿದ್ದರು.
ಆದರೆ ಇದೀಗ ಮೋದಿ ಕೊಳಕ್ಕೆ ಹಾರಿದ ರಾಹುಲ್ ಗಾಂಧಿ ಹೆಸರೆತ್ತದೇ ಚಾಟಿ ಬೀಸಿದ್ದಾರೆ. ಬಿಹಾರದಲ್ಲಿ ಮೀನುಗಾರಿಕೆ ಭಾರೀ ಅಭಿವೃದ್ಧಿಯಾಗಿದೆ. ಆದರೆ ಕೆಲವರು ಈಗ ಕೊಳಕ್ಕೆ ಹಾರಿ ಮುಳುಗುವುದನ್ನು ಪ್ರಾಕ್ಟೀಸ್ ಮಾಡ್ತಿದ್ದಾರೆ ಎಂದು ರಾಹುಲ್ ಬಗ್ಗೆ ವ್ಯಂಗ್ಯ ಮಾಡಿದ್ದಾರೆ.
ಕೆಲವು ದೊಡ್ಡ ದೊಡ್ಡ ವ್ಯಕ್ತಿಗಳು ಈಗ ಇಲ್ಲಿನ ಮೀನು ನೋಡಲು ಬರ್ತಿದ್ದಾರೆ. ನೀರಿಗೆ ಧುಮುಕುತ್ತಿದ್ದಾರೆ. ಬಿಹಾರ ಚುನಾವಣೆಯಲ್ಲಿ ಮುಳುಗಿ ಹೋಗುವುದಕ್ಕೆ ಈಗಲೇ ಪ್ರಾಕ್ಟೀಸ್ ಮಾಡ್ತಿದ್ದಾರೆ ಎಂದು ಮೋದಿ ಲೇವಡಿ ಮಾಡಿದ್ದಾರೆ.