ನವದೆಹಲಿ: ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರದ ವಿರುದ್ಧ ನಿರಂತರವಾಗಿ ಮತಗಳ್ಳತನ ಆರೋಪ ಮಾಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹರ್ಯಾಣದಲ್ಲಿ ಬ್ರೆಜಿಲ್ ಮಾಡೆಲ್ ಒಬ್ಬಳು 22 ಬಾರಿ ಮತ ಚಲಾಯಿಸಿದ್ದಳು ಎಂದು ಅರೋಪಿಸಿದ್ದರು. ಇದಕ್ಕೆ ಬಿಜೆಪಿ ಇಟೆಲಿ ಮಹಿಳೆಯೂ ಮತದಾನ ಮಾಡಿಲ್ವಾ ಎಂದು ತಿರುಗೇಟು ನೀಡಿದೆ.
ನಿನ್ನೆ ಸುದ್ದಿಗೋಷ್ಠಿ ನಡೆಸಿದ್ದ ರಾಹುಲ್ ಗಾಂಧಿ ಹರ್ಯಾಣದಲ್ಲಿ 25 ಲಕ್ಷ ವೋಟ್ ಅಕ್ರಮ ನಡೆದಿದೆ. ಬ್ರೆಜಿಲ್ ಮಾಡೆಲ್ ಬೇರೆ ಬೇರೆ ಹೆಸರಿನಲ್ಲಿ 22 ಮತ ಚಲಾಯಿಸಲಾಗಿದೆ. ಇದುವೇ ಮತಗಳ್ಳತನಕ್ಕೆ ದೊಡ್ಡ ಸಾಕ್ಷಿ ಎಂದಿದ್ದರು.
ರಾಹುಲ್ ಗಾಂಧಿ ಆರೋಪಕ್ಕೆ ಬಿಜೆಪಿ ಟ್ವೀಟ್ ಮೂಲಕ ತಿರುಗೇಟು ನೀಡಿದೆ. ಇಟೆಲಿ ಮಹಿಳೆಯೂ ಇದೇ ರೀತಿ ವೋಟ್ ಹಾಕಿದ್ದಲ್ವಾ? ಅದು ಮರೆತು ಹೋಯಿತಾ ಎಂದು ಪರೋಕ್ಷವಾಗಿ ಸೋನಿಯಾ ಗಾಂಧಿಯವರು ವೋಟ್ ಮಾಡಿದ್ದನ್ನು ಉಲ್ಲೇಖಿಸಿ ವ್ಯಂಗ್ಯ ಮಾಡಿದೆ.
ಸೋನಿಯಾ ಗಾಂಧಿಯವರು ಭಾರತೀಯ ಪ್ರಜೆ ಆಗುವ ಮೊದಲೇ ಮತ ಚಲಾಯಿಸಿದ್ದರು ಎಂದು ಈ ಹಿಂದೆ ದಾಖಲೆಗಳಿಂದ ಬಯಲಾಗಿತ್ತು. ಅದೇ ವಿಚಾರವನ್ನಿಟ್ಟುಕೊಂಡು ಬಿಜೆಪಿ ಈಗ ರಾಹುಲ್ ಗೆ ತಿರುಗೇಟು ನೀಡಿದೆ.