ನವದೆಹಲಿ: ಭಾರತೀಯ ಸೇನೆಯಲ್ಲಿ ಶೇ.10 ರಷ್ಟಿರುವ ಜನರೇ ನಿಯಂತ್ರಣ ಹೊಂದಿದ್ದಾರೆ ಎನ್ನುವ ಮೂಲಕ ರಾಹುಲ್ ಗಾಂಧಿ ವಿವಾದವೆಬ್ಬಸಿದ್ದು, ಸೇನೆಯಲ್ಲೂ ಜಾತಿ ಹುಡುಕುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.
ಭಾರತೀಯ ಸೇನೆ ಬಗ್ಗೆ ಈ ಹಿಂದೆ ಕಾಮೆಂಟ್ ಮಾಡಿದ್ದಕ್ಕೆ ರಾಹುಲ್ ಗಾಂಧಿ ಸುಪ್ರೀಂಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡಿದ್ದರು. ಇದೀಗ ಮತ್ತೆ ಸೇನೆ ಬಗ್ಗೆ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದಾರೆ. ಭಾರತದಲ್ಲಿ ಮೀಸಲಾತಿಯಿಂದ ಹೊರತಾಗಿ ಕೇವಲ ಮೆರಿಟ್ ಆಧಾರದಲ್ಲಿ ಉದ್ಯೋಗ ನೀಡುವ ಸಂಸ್ಥೆಗಳಲ್ಲಿ ಭಾರತೀಯ ಸೇನೆ ಪ್ರಮುಖವಾದುದು.
ಆದರೆ ಈಗ ರಾಹುಲ್ ಗಾಂಧಿ ಭಾರತೀಯ ಸೇನೆಯಲ್ಲಿ ಬಹುಪಾಲು ಮೇಲ್ಜಾತಿಯವರೇ ಉನ್ನತ ಹುದ್ದೆಯಲ್ಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಭಾರತೀಯ ಸೇನೆಯು ಶೇ.10 ರಷ್ಟು ಜನಸಂಖ್ಯೆ ಇರುವವರ ನಿಯಂತ್ರಣದಲ್ಲಿದೆ. ಸೇನೆ ಸೇರಿದಂತೆ ನ್ಯಾಯಾಂಗ ವ್ಯವಸ್ಥೆ ಈ ವರ್ಗದ ಕೈಯಲ್ಲಿದೆ. ಉಳಿದ ಶೇ.90 ರಷ್ಟು ಮಂದಿ ದಲಿತರು, ಹಿಂದುಳಿದವರು ಮತ್ತು ಅತೀ ಹಿಂದುಳಿದವರು. ಕಾಂಗ್ರೆಸ್ ಈ ಶೇ.90 ಮಂದಿ ಘನತೆಯಿಂದ ಬದುಕಬಹುದಾದ ಭಾರತವನ್ನು ಬಯಸುತ್ತದೆ. ಅವರ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ.
ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ರಾಹುಲ್ ಗಾಂಧಿಯವರು ಸೇನೆಯಲ್ಲೂ ಜಾತಿ ಹುಡುಕುತ್ತಿದ್ದಾರೆ. ಪ್ರಧಾನಿ ಮೋದಿ ಮೇಲಿನ ಧ್ವೇಷ ಭಾರತದ ಮೇಲಿನ ಧ್ವೇಷವಾಗಿದೆ ಎಂದಿದ್ದಾರೆ. ಇನ್ನು ನೆಟ್ಟಿಗರೂ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದು ಸೇನೆಯ ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ ಎಂಬುದೇ ಇವರಿಗೆ ಗೊತ್ತಿಲ್ವಾ ಎಂದಿದ್ದಾರೆ.