ಬಿಹಾರ: ವಿಧಾನಭಾ ಚುನಾವಣೆ ಪ್ರಚಾರದ ವೇಳೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನಡೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದಾರಿ ವೇಳೆ ಕೊಳದಲ್ಲಿ ಮೀನು ಹಿಡಿಯುತ್ತಿದ್ದ ಗುಂಪನ್ನು ನೋಡಿ, ಸ್ವತಃ ರಾಹುಲ್ ಗಾಂಧಿ ಅವರೇ ಸಾಂಪ್ರದಾಯಿಕ ಮೀನು ಹಿಡಿಯುವ ಚಟುವಟಿಕೆಯಲ್ಲಿ ಭಾಗಿಯಾದರು.
ವಿಐಪಿ ಮುಖ್ಯಸ್ಥ ಮತ್ತು ಮಹಾಘಟಬಂಧನ್‌ನ ಉಪಮುಖ್ಯಮಂತ್ರಿ ಮುಖೇಶ್ ಸಹಾನಿ, ಕಾಂಗ್ರೆಸ್ ನಾಯಕ ಕನ್ಹಯ್ಯಾ ಕುಮಾರ್ ಮತ್ತು ಇತರರು ಉಪಸ್ಥಿತರಿದ್ದರು.
ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಹಿಂದಿನ ಹಲವು ಚುನಾವಣಾ ಪ್ರಚಾರದ ವೇಳೆ ರಾಹುಲ್ ಗಾಂಧಿ ಅವರ ಸರಳ ನಡೆ ವೈರಲ್ ಆಗಿತ್ತು.
ನಂತರ ಜಿಲ್ಲೆಯಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಅವರು, ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ತೀವ್ರ ವಾಗ್ದಾಳಿ ನಡೆಸಿದರು, ಅವರು ಡೊನಾಲ್ಡ್ ಟ್ರಂಪ್‌ಗೆ "ಹೆದರಿದ್ದಾರೆ" ಮತ್ತು ಕಾರ್ಪೊರೇಟ್ ದೈತ್ಯರಿಂದ "ರಿಮೋಟ್ ಕಂಟ್ರೋಲ್‌ಗೆ ಒಳಗಾಗಿದ್ದಾರೆ ಎಂದು ಹರಿಹಾಯ್ದರು.