ನವದೆಹಲಿ: ನೀವು ಜಿಯೋ ಫೋನ್ ಬಳಸಿದ್ರೆ ದುಡ್ಡು ಅದಾನಿಗೆ ಹೋಗುತ್ತೆ ಎಂದು ಬಿಹಾರ ಚುನಾವಣಾ ರಾಲಿಯಲ್ಲಿ ರಾಹುಲ್ ಗಾಂಧಿ ನೀಡಿದ ಹೇಳಿಕೆ ಈಗ ಟ್ರೋಲ್ ಗೊಳಗಾಗಿದೆ.
ರಾಹುಲ್ ಗಾಂಧಿ ಸದಾ ಒಂದಿಲ್ಲೊಂದು ಯಡವಟ್ಟು ಹೇಳಿಕೆಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಗೊಳಗಾಗುತ್ತಿರುತ್ತಾರೆ. ಇದೀಗ ರಾಹುಲ್ ಆಡಿದ ಮಾತು ಮತ್ತೊಮ್ಮೆ ನೆಟ್ಟಿಗರ ಟ್ರೋಲ್ ಗೆ ಕಾರಣವಾಗಿದೆ.
ಅದಾನಿ ಮತ್ತು ಅಂಬಾನಿ ವಿರುದ್ಧ ರಾಹುಲ್ ಸದಾ ಕಿಡಿ ಕಾರುತ್ತಿರುತ್ತಾರೆ. ಇದೀಗ ಬಿಹಾರ ಚುನಾವಣಾ ಪ್ರಚಾರ ವೇಳೆ ನೀವು ಜಿಯೋ ಫೋನ್ ಬಳಸುತ್ತೀರಿ, ವಿಡಿಯೋ ಮಾಡಿ ನಿಮ್ಮ ಸ್ನೇಹಿತರಿಗೆ ಕಳುಹಿಸುತ್ತೀರಿ, ರೀಲ್ಸ್ ಮಾಡಿ ಖುಷಿಪಡುತ್ತೀರಿ. ಆದರೆ ದುಡ್ಡು ಹೋಗುವುದು ಯಾರಿಗೆ? ಅದಾನಿಗೆ ಎನ್ನುತ್ತಾರೆ.
ಅವರ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಜಿಯೋ ಮಾಲಿಕ ಅದಾನಿ ಅಲ್ಲ ಅಂಬಾನಿ. ಇದೂ ರಾಹುಲ್ ಗೆ ಗೊತ್ತಿಲ್ವಾ ಎಂದು ಕೆಲವರು ಟ್ರೋಲ್ ಮಾಡಿದ್ದಾರೆ. ಈ ವಿಡಿಯೋ ಇಲ್ಲಿದೆ ನೋಡಿ.