ಪ್ರತಿಯೊಬ್ಬರಿಗೂ ಇತ್ತೀಚೆಗಿನ ದಿನಗಳಲ್ಲಿ ಹೃದಯದ ಆರೋಗ್ಯದ್ದೇ ಚಿಂತೆ. ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಖ್ಯಾತ ಹೃದ್ರೋಗ ತಜ್ಞ ಡಾ ದೇವಿ ಪ್ರಸಾದ್ ಶೆಟ್ಟಿಯವರ ಈ ಸಲಹೆಯನ್ನು ಫಾಲೋ ಮಾಡಿ.
ಹೃದಯಾಘಾತ, ಹೃದಯದ ಖಾಯಿಲೆಗಳು ಇತ್ತೀಚೆಗಿನ ದಿನಗಳಲ್ಲಿ ಸಣ್ಣವಯಸ್ಸಿನವರಲ್ಲೂ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಮುಖ್ಯವಾಗಿ ನಮ್ಮ ಜೀವನಶೈಲಿಯೇ ಕಾರಣವಾಗಿರುತ್ತದೆ. ಹೀಗಾಗಿ ಡಾ ದೇವಿ ಶೆಟ್ಟಿಯವರ ಈ ಸಲಹೆ ಪಾಲಿಸುವುದು ಮುಖ್ಯ.
ಅವರ ಪ್ರಕಾರ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಪ್ರಮುಖವಾಗಿ ನಾವು ನಮ್ಮ ದೇಹ ತೂಕವನ್ನು ಆರೋಗ್ಯಕರವಾಗಿಟ್ಟುಕೊಳ್ಳಬೇಕು. ಅತಿಯಾದ ತೂಕ ಅನಾರೋಗ್ಯಕ್ಕೆ ದಾರಿ. ಅದಕ್ಕೆ ನೀವು ಏನು ಆಹಾರ ಸೇವನೆ ಮಾಡುತ್ತೇವೆ ಎನ್ನುವುದು ಮುಖ್ಯವಾಗುತ್ತದೆ.
ಸರಿಯಾದ ಆಹಾರ ಶೈಲಿ ದೇಹ ತೂಕವನ್ನು ಆರೋಗ್ಯವಾಗಿಟ್ಟುಕೊಳ್ಳುತ್ತದೆ. ಇನ್ನೊಂದು ಮುಖ್ಯವಾಗಿ ಎಲ್ಲರೂ ಚಟುವಟಿಕೆಯಿಂದಿರಬೇಕು. ದೇಹಕ್ಕೆ ವ್ಯಾಯಾಮ ನೀಡಬೇಕು. ಚಟುವಟಿಕೆಯಿಂದಿದ್ದರೆ ದೇಹ ತೂಕವೂ ಆಗಲ್ಲ. ಹೃದಯದ ಆರೋಗ್ಯಕ್ಕೆ ಮುಖ್ಯ ಕಾರಣವೇ ದೇಹತೂಕ. ಹೀಗಾಗಿ ಇದರ ಬಗ್ಗೆ ಕಾಳಜಿವಹಿಸಬೇಕು.