ಕೆಲವು ಮಕ್ಕಳು ಪದೇ ಪದೇ ಅಜೀರ್ಣದ ಸಮಸ್ಯೆಯಿಂದ ಬಳಲುತ್ತಾರೆ. ಇದಕ್ಕೆ ಕಾರಣವೇನು ಮತ್ತು ಮಕ್ಕಳ ಆಹಾರ ಕ್ರಮ ಹೇಗಿರಬೇಕು ಇಲ್ಲಿದೆ ನೋಡಿ ವಿವರ.
ಆಹಾರ ಅಭ್ಯಾಸ
ಆಹಾರ ಸೇವನೆ ಮಾಡುವಾಗ ಏನು ತಿನ್ನುತ್ತೇವೆ ಎನ್ನುವಷ್ಟೇ ಎಷ್ಟು ಸಮಯ ತೆಗೆದುಕೊಳ್ಳುತ್ತೇವೆ ಎಂಬುದೂ ಮುಖ್ಯ. ಆತುರ ಆತುರವಾಗಿ ಸೇವನೆ ಮಾಡುವುದು ಅಥವಾ ಅತಿ ನಿಧಾನ ಸೇವನೆ ಒಳ್ಳೆಯದಲ್ಲ.
ಆಮ್ಲೀಯ ಅಂಶ ಅಧಿಕವಾಗಿರುವ ಆಹಾರ ವಸ್ತುಗಳ ಸೇವನೆ ಮಾಡುವುದರಿಂದ ಅಜೀರ್ಣದ ಸಮಸ್ಯೆ ಉಂಟಾಗಬಹುದು. ವಿಶೇಷವಾಗಿ ಚಾಕಲೇಟ್ ಗಳು, ಪೆಪ್ಪರ್ ಮಿಂಟ್, ಖಾರ ಖಾರವಾದ ಮಸಾಲೆ ಆಹಾರಗಳು.
ಬೆಳವಣಿಗೆಯ ಸಮಸ್ಯೆ
ಕೇವಲ ಆಹಾರ ಮಾತ್ರವಲ್ಲ, ಬೆಳವಣಿಗೆ ಸಮಸ್ಯೆಯಿಂದಲೂ ಅಜೀರ್ಣವಾಗಬಹುದು. ಕೆಲವೊಂದು ಹಾರ್ಮೋನ್ ಗಳ ಬೆಳವಣಿಗೆ ಸರಿಯಾಗಿ ಆಗದೇ ಇರುವುದು, ದುರ್ಬಲ ರೋಗ ನಿರೋಧಕ ಶಕ್ತಿಯೂ ಅಜೀರ್ಣಕ್ಕೆ ಕಾರಣಗಳು.
ಅಶಿಸ್ತಿನ ಜೀವನ ಶೈಲಿ
ಜೀವನ ಶೈಲಿಯೂ ಅಜೀರ್ಣಕ್ಕೆ ಕಾರಣವಾಗುತ್ತದೆ. ಊಟ ಮಾಡಿದ ತಕ್ಷಣ ಮಲಗುವುದು ಜೀರ್ಣಕ್ರಿಯೆ ಸಮಸ್ಯೆ ಉಂಟು ಮಾಡಬಹುದು. ಒತ್ತಡ, ಆತಂಕದಿಂದಲೂ ಅಜೀರ್ಣದ ಸಮಸ್ಯೆಯಾಗಬಹುದು.
ಆರೋಗ್ಯ ಸಮಸ್ಯೆ
ಕರುಳಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆ, ಆಹಾರದಿಂದ ಅಲರ್ಜಿಗಳಾಗುತ್ತಿದ್ದರೆ, ಮಲಬದ್ಧತೆ ಇದ್ದಾಗ ಅಜೀರ್ಣದ ಸಮಸ್ಯೆ ಕಾಣಿಸಿಕೊಳ್ಳಬಹುದು. ಇಂತಹ ಸಂದರ್ಭದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು.