ಇತ್ತೀಚೆಗಿನ ದಿನಗಳಲ್ಲಿ ಬಹುತೇಕ ಮಂದಿ ಆರ್ಥರೈಟಿಸ್ ನೋವಿನಿಂದ ಬಳಲುತ್ತಿದ್ದಾರೆ. ಇದಕ್ಕೆ ಕಾರಣಗಳಲ್ಲಿ ಪ್ರಮುಖವಾದುದು ನಮ್ಮ ಜೀವನ ಶೈಲಿ. ಆರ್ಥರೈಟಿಸ್ ಬರದಂತೆ ತಡೆಯಲು ನೀವು ಈ ಮೂರು ಕೆಲಸಗಳನ್ನು ತಪ್ಪದೇ ಮಾಡಬೇಕು.
ದೇಹ ತೂಕ ಕಾಪಾಡಿಕೊಳ್ಳಿ
-
ಮುಖ್ಯವಾಗಿ ನಮ್ಮ ಕೀಲುಗಳಿಗೆ ಹೆಚ್ಚು ಒತ್ತಡ ಬೀಳದಂತೆ ಎಚ್ಚರಿಕೆ ವಹಿಸಬೇಕು. ಇದಕ್ಕೆ ಆರೋಗ್ಯಕರ ದೇಹ ತೂಕ ಹೊಂದಿರಬೇಕು. ವಿಶೇಷವಾಗಿ ಮೊಣಕಾಲು, ಮೊಣಕೈಯಂತಹ ಕೀಲುಗಳ ಭಾಗಕ್ಕೆ ಹೆಚ್ಚು ಒತ್ತಡ ಬೀಳದಂತೆ ಎಚ್ಚರ ವಹಿಸಬೇಕು.
-
ಫ್ಯಾಟ್ ಟಿಶ್ಯೂ ಉರಿಯೂತದ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ. ಇದು ರುಮಟಾಯ್ಡ್ ಆರ್ಥರೈಟಿಸ್ ಗೆ ಕಾರಣವಾಗಬಹುದು. ಇದನ್ನು ತಡೆಯಲು ದೇಹ ತೂಕ ಆರೋಗ್ಯಕರವಾಗಿರಬೇಕು.
-
ನಿಯಮಿತವಾಗಿ ಹಗುರ ವ್ಯಾಯಾಮ ಮಾಡಿ: ಜಡ ಹಿಡಿದವರಂತೆ ಒಂದೇ ಕಡೆ ಕೂರುತ್ತಿರಬೇಡಿ. ನಿಮ್ಮ ಎಲ್ಲಾ ಅಂಗಾಂಗಳಿಗೂ ಚಟುವಟಿಕೆ ನೀಡುವಂತಹ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ ಅಥವಾ ಹಗುರ ವ್ಯಾಯಾಮಗಳನ್ನು ಮಾಡಿ. ಇದರಿಂದ ಕೀಲುಗಳು ಹೆಚ್ಚು ಬಲಯುತಗೊಳ್ಳುತ್ತವೆ.