Select Your Language

Notifications

webdunia
webdunia
webdunia
webdunia

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

Gold
ಬೆಂಗಳೂರು: ಸತತ ಏರಿಕೆಯಾಗುತ್ತಿದ್ದ ಚಿನ್ನದ ಬೆಲೆ ಈಗ ಕೊಂಚ ಇಳಿಕೆಯತ್ತ ಸಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಇಳಿಕೆಯಾಗಿದ್ದರೆ 18,22, 24 ಕ್ಯಾರೆಟ್ ಚಿನ್ನದ ದರ ಏರಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.

ಚಿನ್ನದ ದರ ಏರಿಕೆ
ಮೊನ್ನೆಯಿಂದ ಚಿನ್ನದ ದರ ಭಾರೀ ಏರಿಕೆಯಾಗುತ್ತಲೇ ಇತ್ತು. ಹಬ್ಬದ ಸಂದರ್ಭದಲ್ಲಿ ಚಿನ್ನ ಖರೀದಿಸುವವರ ಸಂಖ್ಯೆಯೂ ಹೆಚ್ಚಾಗಿತ್ತು. ಆದರೆ ಈಗ ಹಬ್ಬ ಮುಗಿದ ಬೆನ್ನಲ್ಲೇ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ ಕಂಡುಬಂದಿದೆ. ಇಂದು ಪರಿಶುದ್ಧ ಚಿನ್ನದ ದರ ಕೊಂಚ ಇಳಿಕೆಯಾಗಿದೆ. ನಿನ್ನೆ ಪರಿಶುದ್ಧ ಚಿನ್ನದ ದರ 1,24,660.00 ರೂ.ಗಳಿತ್ತು. ಇಂದು ಮತ್ತೆ ಇಳಿಕೆಯಾಗಿದ್ದು 1,23,660.00 ರೂ.ಗಳಷ್ಟಾಗಿದೆ.

ಆದರೆ 22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಕೊಂಚ ಏರಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 120 ರೂ. ಏರಿಕೆಯಾಗಿದ್ದು 12,268 ರೂ.ಗಳಷ್ಟಿದೆ.  24 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 110 ರೂ. ಏರಿಕೆಯಾಗಿದ್ದು 11,245 ರೂ.ಗಳಾಗಿವೆ. 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಪ್ರತೀ ಗ್ರಾಂ.ಗೆ 90 ರೂ. ಏರಿಕೆಯಾಗಿದ್ದು 9,201 ರೂ.ಗಳಷ್ಟಿದೆ.


ಬೆಳ್ಳಿ ದರ
ಬೆಳ್ಳಿ ದರವೂ ಈಗ ಇಳಿಕೆಯತ್ತ ಸಾಗಿದೆ. ಇಂದು ಬೆಳ್ಳಿ ಬೆಲೆ ಯಥಾಸ್ಥಿತಿಯಲ್ಲಿದೆ. ಪ್ರತೀ ಕೆ.ಜಿಗೆ ಬೆಳ್ಳಿ ದರ ನಿನ್ನೆ 1,000 ರೂ. ಇಳಿಕೆಯಾಗಿತ್ತು. ಇಂದು ಯಥಾಸ್ಥಿತಿಯಲ್ಲಿದ್ದು 1,51,000 ರೂ. ಗಳಷ್ಟಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡಕ್ಕಿಂತ ಪರಭಾಷೆಗಳಲ್ಲೇ ಇರುವ ಪ್ರಕಾಶ್ ರಾಜ್ ಗೆ ಯಾಕೆ ರಾಜ್ಯೋತ್ಸವ ಪ್ರಶಸ್ತಿ: ನೆಟ್ಟಿಗರ ತರಾಟೆ