ಹೆಚ್ಚಾಗಿ ಅಲೋಪತಿ ಔಷಧಿಗಳನ್ನು ತೆಗೆದುಕೊಳ್ಳುವಾಗ ಅಡ್ಡಪರಿಣಾಮಗಳ ಬಗ್ಗೆಯೂ ಎಚ್ಚರಿಕೆ ಕೊಟ್ಟಿರುತ್ತಾರೆ. ಹೀಗಾಗಿ ಸೈಡ್ ಇಫೆಕ್ಟ್ ಇರುವ ಔಷಧಿಗಳನ್ನು ತೆಗೆದುಕೊಳ್ಳಬಾರದೇ? ಹಿಂದೊಮ್ಮೆ ಖಾಸಗಿ ವಾಹಿನಿಯ ಸಂವಾದದಲ್ಲಿ ಖ್ಯಾತ ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ್ ಹೀಗೆ ಹೇಳಿದ್ದರು.
ಬಹುತೇಕ ಇಂಗ್ಲಿಷ್ ಔಷಧಿಗಳು ಅಡ್ಡಪರಿಣಾಮವನ್ನು ಹೊಂದಿರುತ್ತದೆ. ಕೆಲವೊಂದು ಔಷಧಿಗಳನ್ನು ತೆಗೆದುಕೊಂಡಾಗ ಅಲರ್ಜಿ, ತಲೆ ಸುತ್ತ ಸೇರಿದಂತೆ ಇತರೆ ಅಡ್ಡಪರಿಣಾಮಗಳೂ ಕಂಡುಬರುತ್ತವೆ. ಹೀಗಾಗಿ ಇಂತಹ ಔಷಧಿ ತೆಗೆದುಕೊಳ್ಳುವಾಗ ವೈದ್ಯರ ಸಲಹೆ ಮುಖ್ಯ.
ಡಾ ಸಿಎನ್ ಮಂಜುನಾಥ್ ಅವರ ಪ್ರಕಾರ ಯಾವುದೇ ಔಷಧಿಯನ್ನು ಗುಣ ವರ್ಸಸ್ ಅವಗುಣ ಎಂದು ಪರಿಗಣಿಸುತ್ತೇವೆ. ಶೇ.98 ರಷ್ಟು ನಮಗೆ ಒಳಿತು ಮಾಡಿ ಶೇ.2 ರಷ್ಟು ಅಡ್ಡಪರಿಣಾಮವುಂಟು ಮಾಡಿದರೂ ಅದನ್ನು ಉತ್ತಮ ಔಷಧಿ ಎಂದೇ ಪರಿಗಣಿಸಬೇಕಾಗುತ್ತದೆ.
ಉದಾಹರಣೆಗೆ ರಕ್ತದೊತ್ತಡ, ಕೊಲೆಸ್ಟ್ರಾಲ್, ಸೋಂಕು ಆದಾಗ ಆಂಟಿ ಬಯಾಟಿಕ್ಸ್ ಕೊಡ್ತೀವಿ. ಯಾವುದೇ ಆಗಿದ್ದರೂ ಅಷ್ಟೇ ಒಂದು ಔಷಧಿಯಿಂದ ಅಡ್ಡಪರಿಣಾಮಕ್ಕಿಂತ ಒಳಿತೇ ಹೆಚ್ಚಾಗುತ್ತಿದೆ ಎಂದರೆ ಅದನ್ನು ಒಳ್ಳೆಯ ಔಷಧಿ ಕೆಟಗರಿಗೇ ಪರಿಗಣಿಸಬೇಕಾಗುತ್ತದೆ ಎಂಬುದು ಅವರ ಅಭಿಪ್ರಾಯವಾಗಿದೆ.