ನವದೆಹಲಿ: ಮತಗಳ್ಳತನದ ಬಗ್ಗೆ ಮತ್ತೆ ಮಹತ್ವದ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಹರ್ಯಾಣದಲ್ಲಿ ಬ್ರೆಜಿಲ್ ಮಾಡೆಲ 22 ಬಾರಿ ವೋಟ್ ಮಾಡಿದ್ದಾಳೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಮತ್ತಷ್ಟು ದಾಖಲೆಗಳೊಂದಿಗೆ ಇಂದು ಮಾಧ್ಯಮಗಳ ಮುಂದೆ ಬಂದ ರಾಹುಲ್ ಗಾಂಧಿ ಹರ್ಯಾಣ ಚುನಾವಣೆ ಅಕ್ರಮಗಳನ್ನು ಹೇಳಿದ್ದಾರೆ. ಹರ್ಯಾಣದಲ್ಲಿ ಬರೋಬ್ಬರಿ 25 ಲಕ್ಷ ಮತಗಳ್ಳತನವಾಗಿದೆ ಎಂದು ರಾಹುಲ್ ಆರೋಪಿಸಿದ್ದಾರೆ.
ಕರ್ನಾಟಕದ ಅಳಂದ, ಮಹದೇವಪುರದ ಬಳಿಕ ದೇಶದಾದ್ಯಂತ ಅಕ್ರಮ ನಡೆದಿರಬಹುದು ಎಂದು ನಮ್ಮ ಗಮನಕ್ಕೆ ಬಂತು. ಹೀಗಾಗಿ ಈ ಬಗ್ಗೆ ನಾವು ಬೇರೆ ಬೇರೆ ಕ್ಷೇತ್ರಗಳ ಬಗ್ಗೆ ಗಮನಹರಿಸಿದೆವು. ಇದೀಗ ಹರ್ಯಾಣದ ಮೇಲೆ ಗಮನ ಕೇಂದ್ರೀಕರಿಸಿದ್ದೇವೆ.
ಹರ್ಯಾಣದಲ್ಲಿ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಕ್ಲೀನ್ ಸ್ವೀಪ್ ಮಾಡುತ್ತದೆ ಎಂದಿತ್ತು. ಆದರೆ ಫಲಿತಾಂಶದಲ್ಲಿ ಎಲ್ಲವೂ ಉಲ್ಟಾ ಆಗಿತ್ತು. ಒಬ್ಬಳೇ ಮಹಿಳೆ ಹಲವು ಹೆಸರುಗಳಿಂದ 22 ಬಾರಿ ಮತದಾನ ಮಾಡಿದ್ದಾಳೆ. 10 ಬೂತ್ ಗಳಲ್ಲಿ ಮತಚಲಾವಣೆ ಆಗಿದೆ. ಈ ಮಹಿಳೆ ಬ್ರೆಜಿಲ್ ನ ಮಾಡೆಲ್ ಎಂದು ಗೊತ್ತಾಗಿದೆ. ಇದು ಮತಗಳ್ಳತನಕ್ಕೆ ದೊಡ್ಡ ಸಾಕ್ಷಿ ಎಂದು ಅವರು ಹೇಳಿದ್ದಾರೆ.